ಬಿಳಿ ಕೂದಲಿಗೆ ನೈಸರ್ಗಿಕ ಪರಿಹಾರ ಇಲ್ಲಿದೆ: ದಾಸವಾಳ ಹೂ ಮತ್ತು ಮೊಟ್ಟೆಯ ಹೆರ್ ಮಾಸ್ಕ್ ಟ್ರೈ ಮಾಡಿ
ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ಕೂದಲು ಉದುರುವಿಕೆ ಮತ್ತು ಅಕಾಲಿಕವಾಗಿ ಬಿಳಿಯಾಗುವಿಕೆ ಸಾಮಾನ್ಯ ಸಮಸ್ಯೆಯಾಗಿದೆ. ಜನರು ಕೂದಲು ಕಪ್ಪಾಗಿಸಲು ಹೆಚ್ಚಾಗಿ ಡೈ ಅಥವಾ ಮದರಂಗಿ ಬಳಸುತ್ತಿದ್ದಾರೆ. ಮಾನಸಿಕ ಒತ್ತಡ, ಅನಾರೋಗ್ಯಕರ ಜೀವನಶೈಲಿ, ಮಾಲಿನ್ಯ ಮತ್ತು ಅಸಮತೋಲಿತ ಆಹಾರ ಪದ್ಧತಿಗಳು ಕೂದಲಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ.
ರಾಸಾಯನಿಕ ಉತ್ಪನ್ನಗಳ ಬದಲು ಮನೆಯಲ್ಲೇ ಸಿಗುವ ದಾಸವಾಳ ಹೂ ಬಳಸಿ ನೈಸರ್ಗಿಕವಾಗಿ ಬಿಳಿ ಕೂದಲು ಕಪ್ಪಾಗಿಸಲು ಸಾಧ್ಯವೆಂದು ತಜ್ಞರು ಹೇಳಿದ್ದಾರೆ. ದಾಸವಾಳ ಹೂವಿನ ಹೇರ್ ಮಾಸ್ಕ್ ಕೂದಲು ಉದುರುವಿಕೆಯನ್ನು ತಡೆದು, ಹೊಳಪು ನೀಡುವುದರೊಂದಿಗೆ ಬಣ್ಣವನ್ನು ನೈಸರ್ಗಿಕವಾಗಿ ಕಪ್ಪಾಗಿಸುತ್ತದೆ.
ಹೇರ್ ಮಾಸ್ಕ್ ತಯಾರಿಸುವ ವಿಧಾನ
ಗೋರಂಟಿ ಎಲೆಗಳನ್ನು ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ.
10 ದಾಸವಾಳ ಹೂವನ್ನು ತೊಳೆದು, ಒಂದು ಪಾತ್ರೆಯಲ್ಲಿ ನೀರಿನೊಂದಿಗೆ ಚೆನ್ನಾಗಿ ಕುದಿಸಿ.
ತಣ್ಣಗಾದ ನಂತರ, ಈ ಕಷಾಯವನ್ನು ಗೋರಂಟಿ ಎಲೆ ಪುಡಿ ಮತ್ತು ಮೊಟ್ಟೆಯೊಂದಿಗೆ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ.
ಈ ಪೇಸ್ಟ್ ಅನ್ನು ತಲೆಗೆ ಹಚ್ಚಿ, ಕೆಲವು ಸಮಯದ ನಂತರ ತೊಳೆಯಿರಿ.
ಈ ವಿಧಾನದಿಂದ ಬಿಳಿ ಕೂದಲು ಬುಡದಿಂದಲೇ ಕಪ್ಪಾಗುವ ಸಾಧ್ಯತೆ ಇದ್ದು, ಒಣ ಮತ್ತು ನಿರ್ಜೀವ ಕೂದಲು ರೇಷ್ಮೆಯಂತೆ ಮೃದುವಾಗಿ ಹೊಳೆಯುತ್ತದೆ ಎಂದು ತಿಳಿಸಲಾಗಿದೆ.