ಬಿಳಿ ಕೂದಲಿಗೆ ಮನೆಮದ್ದು: ನ್ಯಾಚುರಲ್ ಹೋಮ್ ಮೇಡ್ ಹೇರ್ ಆಯಿಲ್ ಇಲ್ಲಿದೆ

Date:

ಬಿಳಿ ಕೂದಲಿಗೆ ಮನೆಮದ್ದು: ನ್ಯಾಚುರಲ್ ಹೋಮ್ ಮೇಡ್ ಹೇರ್ ಆಯಿಲ್ ಇಲ್ಲಿದೆ

ತಾತ್ಕಾಲಿಕ ಪರಿಹಾರ ನೀಡುವ ಹೇರ್ ಡೈ ಬಳಕೆಯಿಂದ ಬದಲು, ಮನೆಯಲ್ಲಿ ತಯಾರಿಸಬಹುದಾದ ಒಂದು ನೈಸರ್ಗಿಕ ಎಣ್ಣೆ ಬಿಳಿ ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಈ ಹೇರ್ ಆಯಿಲ್ ಅನ್ನು ಒಮ್ಮೆ ತಯಾರಿಸಿದರೆ ತಿಂಗಳವರೆಗೆ ಶೇಖರಿಸಿಟ್ಟುಕೊಳ್ಳಬಹುದು. ನಿಯಮಿತವಾಗಿ ಬಳಸುವುದರಿಂದ ಬಿಳಿ ಕೂದಲು ಕಪ್ಪಾಗುವುದಷ್ಟೇ ಅಲ್ಲ, ಹೇರ್ ಫಾಲ್, ತಲೆಹೊಟ್ಟು, ಸ್ಪ್ಲಿಟ್ ಹೇರ್ ಸೇರಿದಂತೆ ಅನೇಕ ಕೂದಲಿನ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.
ಇತ್ತೀಚಿನ ದಿನಗಳಲ್ಲಿ ಧೂಳು, ಮಾಲಿನ್ಯ, ಹಾಗೂ ಕೆಟ್ಟ ಜೀವನಶೈಲಿಯಿಂದಾಗಿ ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗುತ್ತಿದೆ. ಆದರೆ ಮನೆಯಲ್ಲಿ ಇರುವ ಕೊಬ್ಬರಿ ಎಣ್ಣೆ, ಮೆಂತ್ಯ, ಲವಂಗ ಮತ್ತು ಅರಿಶಿನದ ಮಿಶ್ರಣದಿಂದ ಬಿಳಿ ಕೂದಲು ನ್ಯಾಚುರಲ್ ಆಗಿ ಕಪ್ಪಾಗುತ್ತದೆ.
ತಯಾರಿಸುವ ವಿಧಾನ:
• ಹತ್ತಿಯಲ್ಲಿ ಒಂದು ಸ್ಪೂನ್ ಮೆಂತ್ಯ, 5–6 ಲವಂಗ, ಹಾಗೂ ಕಾಲು ಚಮಚ ಅರಿಶಿನ ಹಾಕಿ ಉಂಡೆ ಮಾಡಿ.
• ಅದನ್ನು ಮಣ್ಣಿನ ದೀಪದೊಳಗೆ ಇಟ್ಟು ತುಪ್ಪದೊಂದಿಗೆ ಹಚ್ಚಿ.
• ದೀಪ ಸಂಪೂರ್ಣ ಉರಿದ ಬಳಿಕ ಮೇಲಿನ ತಟ್ಟೆಗೆ ಅಂಟಿದ ಕಪ್ಪನ್ನು ಕೆರೆದು ಬಟ್ಟಲಿಗೆ ಹಾಕಿ.
• ಇದಕ್ಕೆ ಕೊಬ್ಬರಿ ಎಣ್ಣೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಸಂಗ್ರಹಿಸಬಹುದು.
ಬಳಸುವ ವಿಧಾನ:
ಕೂದಲು ತೊಳೆಯುವ ಒಂದೆರಡು ಗಂಟೆಗಳ ಮುಂಚೆ ಈ ಎಣ್ಣೆಯನ್ನು ಕೂದಲಿನ ಬುಡಕ್ಕೆ ಹಚ್ಚಿ, ನಂತರ ಸೌಮ್ಯ ಶಾಂಪೂ ಬಳಸಿ ತೊಳೆಯಬೇಕು. ನಿಯಮಿತವಾಗಿ ಹೀಗೆ ಮಾಡಿದರೆ ಬಿಳಿ ಕೂದಲು ಕಪ್ಪಾಗುವುದರ ಜೊತೆಗೆ, ಕೂದಲು ದಪ್ಪವಾಗಿ ಹಾಗೂ ಉದ್ದವಾಗಿ ಬೆಳೆಯುತ್ತದೆ.

Share post:

Subscribe

spot_imgspot_img

Popular

More like this
Related

ವಿಪಕ್ಷಗಳಿಗೆ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರಿಲೀಸ್ ಮಾಡಿದ ಸಿಎಂ ಸಿದ್ದರಾಮಯ್ಯ!

ವಿಪಕ್ಷಗಳಿಗೆ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರಿಲೀಸ್ ಮಾಡಿದ ಸಿಎಂ ಸಿದ್ದರಾಮಯ್ಯ! ಬೆಂಗಳೂರು:...

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ ಜಾಗತಿಕವಾಗಿ...

ತುಳಸಿ ಟೀ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು

ತುಳಸಿ ಟೀ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು ಭಾರತದಲ್ಲಿ ಪವಿತ್ರವೆಂದು ಪರಿಗಣಿಸಲ್ಪಡುವ ತುಳಸಿ...

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್!

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್! ಬೆಂಗಳೂರು:- ಆಟೋಗೆ ಕಸ...