ಇಂದು ಪ್ರಾರಂಭಗೊಂಡ ಮಳೆಗಾಲದ ಕರ್ನಾಟಕ ವಿಧಾನಮಂಡಲದ ಅಧಿವೇಶನದಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ಸಂತಾಪ ಸೂಚಿಸುವ ಮುನ್ನವೇ, ರಾಜಕೀಯ ಪರಿಸ್ಥಿತಿಯಲ್ಲಿ, ಈ ರಾಜಕೀಯ ವಿದ್ಯಾಮಾನದಲ್ಲಿ ತಾವು ಬಹುಮತ ಸಾಭೀತು ಪಡಿಸುತ್ತೇನೆ. ಇದಕ್ಕಾಗಿ ತಾವು ಕಾಲಾವಕಾಶ ಮಾಡಿಕೊಡಬೇಕು ಎಂದು ಸ್ಪೀಕರ್ ರಮೇಶ್ ಕುಮಾರ್ ಆವರನ್ನು ಕೋರಿಕೊಂಡಿದ್ದರು.
ಈ ಬೆಳವಣಿಗೆಯ ನಂತ್ರ, ಕಲಾಪ ಉಪಸಮಿತಿ ಸಭೆ ನಡೆಯಿತು. ಈ ಸಭೆಯಲ್ಲಿ ದೋಸ್ತಿಗಳ ಬಹುಮತ ಸಾಭೀತು ಪಡಿಸಲು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿವರು ಬುಧವಾರಕ್ಕೆ ಬಹುಮತ ಸಾಭೀತುಪಡಿಸಲು ಕಾಲಾವಕಾಶ ಕೇಳಿದ್ದಾರೆ. ಹೀಗಾಗಿ ದೋಸ್ತಿ ಸರ್ಕಾರದ ಬಹುಮತ ಸಾಭೀತು ಪಡಿಸಲು ಬುಧವಾರಕ್ಕೆ ಸಮಯ ನಿಗಧಿ ಬಹುತೇಕ ಖಚಿತವಾಗಿದೆ.