ಬೃಹತ್ ಟಾರ್ಗೆಟ್ ಅಲ್ಲ ಆದರೂ ಭಾರತಕ್ಕೆ ಕಠಿಣ ಸವಾಲು ನೀಡಿದ ದ.ಆಫ್ರಿಕಾ..!

Date:

ಟಾಸ್ ಸೊತು ಫೀಲ್ಡಿಂಗ್ ಗೆ ಇಳಿದ ಭಾರತಕ್ಕೆ ದಕ್ಷಿಣ ಆಫ್ರಿಕಾ 228 ರನ್‍ಗಳ ಗುರಿಯನ್ನು ನೀಡಿದೆ, ಆರಂಭ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್‍ಗಳು ಬೇಗನೇ ಔಟಾದರೂ ಸಹ ಅಂತಿಮವಾಗಿ ಬೌಲರ್ ಗಳು ಆಡಿದ ಪರಿಣಾಮ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 227 ರನ್ ಗಳ ಸ್ಪರ್ಧಾತ್ಮಕ ಮೊತ್ತವನ್ನು ನೀಡಿದೆ.

ಆರಂಭದಿಂದಲೂ ದ.ಆಫ್ರಿಕಾದ ಬ್ಯಾಟ್ಸ್ ಮನ್ ಗಳ ಮೇಲೆ ಸವಾರಿ ಮಾಡಿದ ಟೀಂ ಇಂಡಿಯಾ ಬೌಲರ್ ಜಸ್ಪ್ರೀತ್ ಬುಮ್ರಾ 6 ರನ್ ಗಳಿಸಿದ್ದ ಹಶಿಮ್ ಆಮ್ಲಾ ಮತ್ತು 10 ರನ್ ಗಳಿಸಿದ್ದ ಡಿ ಕಾಕ್ ವಿಕೆಟ್ ಪಡೆಯುವುದರೆ ಮೂಲಕ ದ.ಆ ತಂಡಕ್ಕೆ ಆಘಾತವನ್ನು ನೀಡಿದ್ರು.

ನಂತರ ದಕ್ಷಿಣ ಆಫ್ರಿಕಾ ತಂಡದ ನಾಯಕ ಫಾಫ್ ಡುಪ್ಲೆಸಿಸ್, ರಸಿ ವ್ಯಾನ್ ಡರ್ ಡಸೆನ್ ಜೊತೆಯಾಗಿ ತಂಡಕ್ಕೆ ಚೇತರಿಕೆ ನೀಡುವ ಪ್ರಯತ್ನ ನಡೆಸಿದರು. ಈ ಜೋಡಿ 3ನೇ ವಿಕೆಟ್‍ಗೆ 54 ರನ್ ಗಳ ಜೊತೆಯಾಟ ನೀಡಿತು.

ನಂತರ ಸ್ಪಿನ್ನರ್ ಯಜುವೇಂದ್ರ ಚಹಲ್ 38 ರನ್ ಗಳಿಸಿ ಆಟವಾಡುತ್ತಿದ್ದ ಡುಪ್ಲೆಸಿ ಹಾಗೂ 22 ರನ್ ಗಳಿಸಿದ್ದ ರಸಿ ವ್ಯಾನ್ ಡರ್ ಡಸೆನ್ ವಿಕೆಟ್ ಪಡೆದು ಪಡೆದು ದ.ಆ ತಂಡಕ್ಕೆ ಡಬಲ್ ಆಘಾತ ನೀಡಿದರು.

ಇನ್ನುಳಿದಂತೆ ಡೆವಿಡ್ ಮಿಲ್ಲರ್ 31, ಜೆಪಿ ಡುಮಿನಿ 3, ಆಂಡಿಲ್ ಹೆಹ್ಲುಕ್ವಾಯೋ 34, ಕ್ರಿಸ್ ಮೊರಿಸ್ 42, ಕಾಗಿಸೊ ರಬಾಡ 31 ರನ್ ಗಳಿಸಿ ತಂಢದ ಮೊತ್ತವನ್ನು 200 ರ ಗಡಿದಾಟುವಂತೆ ಮಾಡಿದ್ರು.

ಇನ್ನು ಭಾರತದ ಪರ ಚಹಲ್ 4 ವಿಕೆಟ್ ಕಿತ್ತರೆ, ಭುವನೇಶ್ವರ್ ಕುಮಾರ್, ಬುಮ್ರಾ ತಲಾ 2 ವಿಕೆಟ್, ಕುಲದೀಪ್ ಯಾದವ್ ಒಂದು ವಿಕೆಟ್ ಪಡೆದರು

 

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...