ಬೆಂಗಳೂರಿನಲ್ಲಿ ಇಂದಿನಿಂದಲೇ 144 ಜಾರಿ; ಜಾಗ್ರತೆ!

0
54

ಕೋವಿಡ್​ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ರಾತ್ರಿ ನಿಷೇಧಾಜ್ಞೆ, ವಾರಾಂತ್ಯದ ನಿಷೇಧಾಜ್ಞೆ ಹಲವು ರೀತಿಯ ನಿರ್ಬಂಧ ವಿಧಿಸಿದೆ.

ಮತ್ತೊಂದೆಡೆ ನಗರದಲ್ಲಿ ಜನಸಂಚಾರ ದಟ್ಟಣೆ ತಡೆಯಲು ನಗರ ಪೊಲೀಸ್ ಆಯುಕ್ತರಾದ ಕಮಲ್​ ಪಂತ್​​ ಅವರು ಸೆಕ್ಷನ್ 144 ಜಾರಿ ಮಾಡಿದ್ದಾರೆ.

ವಾರಾಂತ್ಯದಲ್ಲಿ ಸಾಮಾನ್ಯವಾಗಿರುವ ಜನಜಂಗುಳಿ ತಪ್ಪಿಸಲು ನಿಷೇಧಾಜ್ಞೆ ಜಾರಿಯಾಗಿದೆ. ಶುಕ್ರವಾರ ರಾತ್ರಿ 8 ಗಂಟೆಯಿಂದಲೇ ಆರಂಭವಾಗುವ ನಿಷೇಧಾಜ್ಞೆ ಸೋಮವಾರ ಬೆಳಗ್ಗೆ 5 ಗಂಟೆಗೆ ಮುಕ್ತವಾಗಲಿದೆ. ಅಲ್ಲದೇ, ಸದ್ಯ ಜಾರಿಯಲ್ಲಿರುವ ರಾತ್ರಿ ನಿಷೇಧಾಜ್ಞೆ ಕೂಡ ಜನವರಿ 19ರ ವರೆಗೆ ಮುಂದುವರೆಯಲಿದೆ. ಇದರಿಂದ ಉದ್ಯಮಗಳು, ಶಾಪಿಂಗ್​ ಮಾಲ್, ಥಿಯೇಟರ್, ಶಾಪಿಂಗ್ ಸ್ಟ್ರೀಟ್ ಗಳಿಗೆ ನಷ್ಟವಾಗಲಿದೆ. ಅಲ್ಲದೇ, ಇಂದಿನಿಂದ ಹೋಟೆಲ್​​, ರೆಸ್ಟೋರೆಂಟ್ ಸೇರಿದಂತೆ ಸಾರ್ವಜನಿಕ ಅಂಗಡಿಗಳಲ್ಲಿ ಶೇ. 50ರಷ್ಟು ಮಿತಿ ಜಾರಿಗೆ ಬರಲಿದೆ.

144 ಸೆಕ್ಷನ್ ಜಾರಿ:

ಈ ನಡುವೆ ನಗರದಲ್ಲಿ ಜನಸಂಚಾರ ದಟ್ಟಣೆ ತಡೆಗೆ ನಗರ ಪೊಲೀಸ್ ಆಯುಕ್ತರು 144 ಸೆಕ್ಷನ್ ಜಾರಿಗೊಳಿಸಿದ್ದಾರೆ. ಇಂದಿನಿಂದ ಜನವರಿ 19ವರೆಗೂ ನಗರದಲ್ಲಿ ಈ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಪ್ರತಿಭಟನೆ, ರ‍್ಯಾಲಿ, ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.

ಕಾನೂನು ನಿಯಮ ಉಲ್ಲಂಘನೆ ಕಂಡು ಬಂದರೆ ಅಂತಹವರ ವಿರುದ್ಧ ಐಪಿಸಿ 188 ಸೆಕ್ಷನ್, ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು‌ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here