ಬೆಂಗಳೂರಿನಲ್ಲಿ ಈ ಜಾಗದಲ್ಲಿ ಹೆಚ್ಚಾಗ್ತಾ ಇದೆ ಕೊರೊನಾವೈರಸ್!

1
52

ಬೆಂಗಳೂರು ನಗರದಲ್ಲಿ 376 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಬಿಬಿಎಂಪಿ ಹೊಸ ಪ್ರಕರಣಗಳ ಮೂಲ ಪತ್ತೆ ಹಚ್ಚಲು ಅಧ್ಯಯನವನ್ನು ನಡೆಸಿದೆ. ಹೆಚ್ಚು ಜನಸಂದಣಿ ಇರುವ ಮಾರುಕಟ್ಟೆಗಳು ಸೋಂಕು ಹರಡುವ ಪ್ರದೇಶವಾಗಿದೆ. ವಾರ್ಡ್‌ ನಂಬರ್ 57ರ ಸಿ. ವಿ. ರಾಮನ್ ನಗರ ಆರು ಕ್ಲಸ್ಟರ್‌ನಲ್ಲಿ 25 ರಿಂದ 27 ಹೊಸ ಕೋವಿಡ್ ಪ್ರಕರಣ ದಾಖಲಾಗಿತ್ತು. ಈ ಜನರ ಟ್ರಾವೆಲ್ ಹಿಸ್ಟರಿ ಹುಡುಕಿ ಹೊರಟ ಬಿಬಿಎಂಪಿ ಮಾರುಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿದ್ದನ್ನು ಪತ್ತೆ ಹಚ್ಚಿದೆ.

ಹೊಸ ಪ್ರಕರಣಗಳ ಹಬ್ಬುವಿಕೆ ಮಾಹಿತಿ ಶೀಟ್‌ನಲ್ಲಿ ನೋಡಿದಾಗ ಎಲ್ಲರ ಟ್ರಾವೆಲ್ ಹಿಸ್ಟರಿ ಮಾರುಕಟ್ಟೆಯಾಗಿದೆ. ಆದ್ದರಿಂದ ಮಾರುಕಟ್ಟೆ ಪ್ರದೇಶದಲ್ಲಿ ಹೆಚ್ಚಿನ ಕಣ್ಗಾವಲು ಇಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಿಬ್ಬಂದಿ ಕೊರತೆಯ ಕಾರಣ ಹೊಸ ಮತ್ತು ಹಳೆಯ ಮಾರುಕಟ್ಟೆಗಳಲ್ಲಿ ಕಣ್ಗಾವಲು ಇಡುವುದು ಬಿಬಿಎಂಪಿಗೆ ಸವಾಲು ಆಗಿದೆ. ಕೆ. ಆರ್. ಮಾರುಕಟ್ಟೆ, ಕಲಾಸಿಪಾಳ್ಯ, ಯಶವಂತಪುರದಲ್ಲಿ ಮಾತ್ರ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗುತ್ತಿದೆ.

ಬಿಬಿಎಂಪಿ ಒಟ್ಟು 54 ತಂಡಗಳನ್ನು ಮಾಡಿದೆ, ಒಂದು ತಂಡದಲ್ಲಿ 4 ಮಾರ್ಷಲ್‌ಗಳಿದ್ದಾರೆ. ಬೆಳಗ್ಗೆ 6 ರಿಂದ ಮಧ್ಯಾಹ್ನ 2, ಮಧ್ಯಾಹ್ನ 2 ರಿಂದ ರಾತ್ರಿ 8 ಗಂಟೆಯ ತನಕ ಪ್ರತಿ ವಿಭಾಗದಲ್ಲೂ ತಂಡ ಕಾರ್ಯ ನಿರ್ವಹಣೆ ಮಾಡುತ್ತಿದೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಬೆಂಗಳೂರು ನಗರದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಕಳೆದ 7 ದಿನಗಳಲ್ಲಿ 2731 ಹೊಸ ಪ್ರಕರಣ ನಗರದಲ್ಲಿ ದಾಖಲಾಗಿದೆ. ಜೂನ್ 28ರ ಹೆಲ್ತ್ ಬುಲೆಟಿನ್ ಪ್ರಕಾರ ಬೆಂಗಳೂರು ನಗರದಲ್ಲಿ 376 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 8,176 ಆಗಿದೆ.

 

 

1 COMMENT

LEAVE A REPLY

Please enter your comment!
Please enter your name here