‘ಅವನ್ಯಾರೋ ಕಿತ್ತೋದ್ ನನ್ಮಗ ಹುಲಿ ಉಗುರು ಹಾಕಿ ತಗ್ಲಾಕ್ಕೊಂಡ’.
ಹುಲಿ ಉಗುರಿನ ಪೆಂಡೆಂಟ್ ವಿಚಾರಕ್ಕೆ ಸಂಬಂಧಿಸಿದ ವಿಚಾರ
ಡೈಲಾಗ್ ಮಾಸ್ಟರ್ ಸಂತೋಷ್ಗೆ ನವರಸ ನಾಯಕನಿಂದ ಕ್ಲಾಸ್
43 ವರ್ಷದ ಹಿಂದೆ ನನ್ನ ತಾಯಿ ಕೊಟ್ಟ ಪೆಂಡೆಂಟ್ ಎಂದ ಜಗ್ಗೇಶ್
ಹುಲಿ ತರ ಬದ್ಕೊ ಮಗನೇ ಅಂತ ಪ್ರೀತಿಯಿಂದ ಕೊಟ್ಟಿದ್ದ ಪೆಂಡೆಂಟ್
ಹುಲಿ ಉಗುರಿನ ಪ್ರಕರಣ ಸದ್ಯ ತಣ್ಣಗಾಗುತ್ತಿದ್ದಂತೆ , ಇದೀಗ ಬೂದಿ ಮುಚ್ಚಿದ ಕೆಡದಂತೆ ಮತ್ತೆ ಈ ವಿಚಾರ ಕಾವೇರಿದೆ. ಕಾರ್ಯಕ್ರಮವೊಂದರಲ್ಲಿ ನಟ ಜಗ್ಗೇಶ್ ಅವರು ಮಾತಿನ್ನಲ್ಲೇ ಛಾಟಿ ಬೀಸಿದ್ದಾರೆ. ಹುಲಿ ಉಗುರಿನ ಕೇಸ್ ಅನ್ನ ಜನಸಂದಣಿಯಲ್ಲಿ ಹಂಚಿಕೊಂಡಿದ್ದೂ, 43 ವರ್ಷದ ಹಿಂದೆ ನನ್ನ ತಾಯಿ ಪ್ರೀತಿಯಿಂದ ಹುಲಿ ಉಗುರಿನ ಪೆಂಡೆಂಟ್ ಕೊಟ್ಟಿದ್ದರು ಎಂದರು. ‘ಅವನ್ಯಾರೋ ಕಿತ್ತೋದ್ ನನ್ಮಗ ಹುಲಿ ಉಗುರು ಹಾಕಿ ತಗ್ಲಾಕ್ಕೊಂಡ’ ಅಂತ ತಮಾಷೆಯಿಂದ ವರ್ತೂರ್ ಸಂತೋಷ್ ಗೆ ಛಾಟಿ ಬೀಸಿದ್ದಾರೆ