No menu items!
14.3 C
Munich
Saturday, May 30, 2026

ನಿಗೂಢ ವಸ್ತು ಸ್ಫೋಟ: ಬ್ಲಾಸ್ಟ್ ನ ತೀವ್ರತೆಯಿಂದ ಇಬ್ಬರಿಗೆ ಸಣ್ಣಪುಟ್ಟ ಗಾಯ

Must read

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪಳದಲ್ಲಿ ಬ್ಯಾಗ್ʼನಲ್ಲಿದ್ದ ವಸ್ತು ಸ್ಫೋಟಗೊಂಡು ಹಲವರಿಗೆ ಗಾಯಗಳಾಗಿರುವಂತಹ ಘಟನೆ ನಡೆದಿದೆ. ಬೆಡ್ಶೀಟ್ ಮಾರಲು ಬಂದಿದ್ದ ಆಂಥೋಣಿ ಎಂಬಾತ ಸೇರಿದಂತೆ ಇತರೆ ಬೆಡ್ಶೀಟ್ ವ್ಯಾಪಾರಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಗಾಯಾಳುಗಳಿಗೆ ಶಿರಾಳಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಉಮೇಶ್ ಎಂಬಾತ ಆಂಥೋಣಿ ಬಳಿ ಬ್ಯಾಗ್ ಇಟ್ಟು ಹೋಗಿದ್ದ. ಈ ವೇಳೆ ಬ್ಯಾಗ್ ಸ್ಫೋಟಗೊಂಡು ಅವಘಡ ಸಂಭವಿಸಿದೆ. ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -spot_img

More articles

- Advertisement -spot_img

Latest article