ಕೆಜಿಎಫ್ ಸಿನಿಮಾದ ಯಶಸ್ಸಿನ ಬಳಿಕ ರಾಕಿಂಗ್ ಸ್ಟಾರ್ ಯಶ್ ಮತ್ತು ಪ್ರಶಾಂತ್ ನೀಲ್ ಅವರ ಕೆಜಿಎಫ್ ಚಾಫ್ಟರ್-2 ಶುರುವಾಗಿದೆ, ಈ ಹಿಂದೆ ಸರಳವಾಗಿ ಚಿತ್ರದ ಮುಹೂರ್ತ ನಡೆಸಿದ್ದ ಚಿತ್ರತಂಡ ಚಿತ್ರಕ್ಕಾಗಿ ಹೊಸ ಪ್ರತಿಭೆಗಳ ಹುಡುಕಾಟಕ್ಕಾಗಿ ಆಹ್ವಾನ ನೀಡಿತ್ತು.
ಇಂತಹ ಕೆಜಿಎಫ್ 2′ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೆ ಯಾರು ತಾನೆ ಮಿಸ್ ಮಾಡಿಕೊಳ್ಳುತ್ತಾರೆ ಅಲ್ವಾ.
ಅದರಂತೆ ಇಂದು ಸಿನಿಮಾ ಕೆಲವು ಪಾತ್ರಗಳಿಗೆ ಆಡಿಷನ್ ನಡೆಯುತ್ತಿದೆ.
ಮಲ್ಲೇಶ್ವರಂ ನಲ್ಲಿ ನಡೆಯುತ್ತಿರುವ ಆಡಿಷನ್ ಗಾಗಿ ರಾಜ್ಯದ ನಾನಾ ಊರುಗಳಿಂದ ಬಂದಿರುವವರ ಸಂಖ್ಯೆ ನೋಡಿದರೆ ನಿಜಕ್ಕೂ ಆಶ್ಚರ್ಯ ಆಗುತ್ತಿದೆ.
ಮಲ್ಲೇಶ್ವರಂ ನ GM Rejoyz ನಲ್ಲಿ ಚಿತ್ರದ ಆಡಿಷನ್ ನಡೆಯುತ್ತಿದೆ, ಬೆಳಗ್ಗೆ 8 ಗಂಟೆಯಿಂದಲೇ ಚಿತ್ರದ ಆಡಿಷನ್ ಶುರುವಾಗಿದ್ದು ಸಂಜೆ ಆರು ಗಂಟೆಯವರೆಗೂ ನಡೆಯಲಿದೆ, ಚಿತ್ರದ ಅವಕಾಶಕ್ಕಾಗಿ ಪ್ರತಿಭೆಗಳು ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.
ಇನ್ನು ಆಡಿಷನ್ಗೆ ಭಾರೀ ಜನಸ್ತೋಮ ಆಗಮಿಸಿರುವುದರಿಂದ ಜನರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ಇದರಲ್ಲಿ ಭಾಗಿಯಾಗುವವರಿಗೆ ಒಂದು ನಿಮಿಷದಲ್ಲಿ ತಮ್ಮ ಪ್ರತಿಭೆ ತೋರಿಸಲು ಅವಕಾಶ ನೀಡಲಾಗುತ್ತಿದೆ.
8 ರಿಂದ 16 ವರ್ಷದ ಮಕ್ಕಳು ಹಾಗೂ 25 ವರ್ಷದ ಯುವಕರು ಆಡಿಷನ್ ನಲ್ಲಿ ಭಾಗಿಯಾಗಲು ಅರ್ಹರಾಗಿರುತ್ತಾರೆ ಎಮದು ಚಿತ್ರತಂಡ ತಿಳಿಸಿದೆ.