ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ – ಕಳವಳ ವ್ಯಕ್ತಪಡಿಸಿದ ಸಚಿವ ಹೆಚ್​ಕೆ ಪಾಟೀಲ್

0
181

ಗದಗ:- ಹೆಚ್ ಕೆ ಪಾಟೀಲ್ ನೀರಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಬೇಸಿಗೆಯಲ್ಲಿ ಕುಡಿಯುವ ನೀರಿ ಸಮಸ್ಯೆ ಎದುರಾಗಲಿದೆ ಎಂದು ಗದಗದಲ್ಲಿ ಸಚಿವ ಹೆಚ್​ಕೆ ಪಾಟೀಲ್ ಆತಂಕ ಹೊರ ಹಾಕಿದ್ದಾರೆ.

ಈ ಸಂಬಂಧ ಮಾತನಾಡಿದ ಅವರು,ಮುಂದಿನ ಜೂನ್, ಜುಲೈ ವರೆಗೂ ಮಳೆ ಬರುವ ಲಕ್ಷಣಗಳು ಕಡಿಮೆ ಇದೆ. ವಾಡಿಕೆ ಮಳೆಗಿಂತ ಬಹಳ ಕೊರತೆ ಇದೆ. ಹೀಗಾಗಿ ಕುಡಿಯುವ ಕೊರತೆ ಸಾಧ್ಯತೆ ಇದೆ‌. ಸಾರ್ವಜನಿಕರು ನೀರಿನ ಬಳಕ ವಿಚಾರ ಮಾಡಿ ಬಳಕೆ ಮಾಡಬೇಕಾದ ಮಾನಸಿಕ ಸ್ಥಿತಿಗೆ ಬರಬೇಕಿದೆ. ನೀರು ಇದ್ದರೆ ಹೇಗೆ ಬೇಕಾದರೂ ಬಳಕೆ ಮಾಡುತ್ತೇವೆ. ಆದರೆ ನೀರಿನ ಕೊರತೆ ಆಗುವ ಸಾಧ್ಯತೆ ಇರುವುದರಿಂದ ಎಲ್ಲರೂ ಮುಂಜಾಗ್ರತೆಯಿಂದ ಇರಬೇಕು ಎಂದರು.

ನೀರು ಹಾಳು‌ ಮಾಡದೇ ಮಿತವಾಗಿ ಬಳಸಬೇಕು ಅಂತ ಜಿಲ್ಲೆಯ ಜನರಿಗೆ ಮನವಿ ಮಾಡಿದ ಹೆಚ್​ಕೆ ಪಾಟೀಲ್, ಗದಗ ಜಿಲ್ಲೆಯಲ್ಲಿ ಭೀಕರ ಬರ ಹಿನ್ನೆಲೆ ಮೇವು, ನೀರಿನ ಕೊರತೆ ಆಗದಂತೆ ಎಚ್ಚರಿಕೆ ವಹಿಸುವಂತ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ‌ ಮೇವು ಬ್ಯಾಂಕ್ ತೆರೆಯಲು ಸೂಚಿಸಿದರು.