ಪಿಎಂ ಸ್ವನಿಧಿ ಯೋಜನೆ ಪ್ರಗತಿ ಪರಿಶೀಲನೆ ವಿಚಾರವಾಗಿ ಬ್ಯಾಂಕ್ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಸಿಎಂ ಯಡಿಯೂರಪ್ಪ. ಬ್ಯಾಂಕ್ ಗಳ ವರ್ತನೆಗೆ ಸಿಎಂ ಕೆಂಡಾಮಂಡಲ ಸಾಲ ನೀಡೋದ್ರಲ್ಲಿ ಕರ್ನಾಟಕ 5 ನೇ ಸ್ಥಾನದಲ್ಲಿ ಇದೆ ಅನೇಕ ಬ್ಯಾಂಕ್ ಗಳು ಸಾಲ ಕೊಡುತ್ತಿಲ್ಲ ಅಂತ ನಮಗೆ ದೂರು ಬಂದಿದೆ ಅಂಕಿ- ಅಂಶಗಳು ನೀವು ಸಾಲ ಸರಿಯಾಗಿ ಕೊಡ್ತಿಲ್ಲ ಅಂತ ಹೇಳುತ್ತಿವೆ.
ನಿಮ್ಮ ಈ ವರ್ತನೆ ಸಹಿಸಲು ಸಾಧ್ಯವಿಲ್ಲ ಪಿಎಂ ಸ್ವನಿಧಿ ಯೋಜನೆಯಲ್ಲಿ ನಾವು ಮೊದಲ ಸ್ಥಾನಕ್ಕೆ ಬರಬೇಕು, ಫೆಬ್ರವರಿ ಅಂತ್ಯದ ವೇಳೆಗೆ ಎಲ್ಲ ಸರಿ ಮಾಡಬೇಕು ಇದಕ್ಕೆ ಅಗತ್ಯವಾದ ಕ್ರಮ ಬ್ಯಾಂಕ್ ಗಳು ತೆಗೆದುಕೊಳ್ಳಬೇಕು ಪ್ರಾಮಾಣಿಕವಾಗಿ ಲೋನ್ ಕೊಡುವ ಕೆಲಸ ಮಾಡಿ ಮತ್ತೆ ಲೋನ್ ಕೊಡದ ವಿಚಾರ ಗಮನಕ್ಕೆ ಬಂದರೆ ಸರ್ಕಾರ ಸಹಿಸೊಲ್ಲ ಎಂದು ಬ್ಯಾಂಕ್ ಅಧಿಕಾರಿಗಳ ವಿರುದ್ದ ಸಿಎಂ ಯಡಿಯೂರಪ್ಪ ಗರಂ ಆಗಿದ್ದಾರೆ.