ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರ ಹಿರಿಯ ಸಹೋದರ ಹಾಗೂ ಮಾಜಿ ಶಾಸಕ ವಿಜಯ್ ಕುಮಾರ್ ಕಂಡ್ರೆ
ವಿಜಯ್ ಕುಮಾರ್ ಖಂಡ್ರೆ ಅವರು ಹೃದಯಾಘಾತಕ್ಕೆ ಒಳಗಾಗಿ ಹೈದರಾಬಾದಿನ ಖಾಸಗಿ ಸನ್ ಶೈನ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ 10.30 ರ ಸುಮಾರಿಗೆ ವಿಧಿವಶರಾಗಿದ್ದಾರೆ.
ವಿಜಯ್ ಕುಮಾರ್ ಖಂಡ್ರೆ ಅಂತ್ಯಸಂಸ್ಕಾರ ನಾಳೆ ಮಧ್ಯಾಹ್ನ 1 ಗಂಟೆಗೆ ಸ್ವಗ್ರಾಮ ಬಾಲ್ಕಿಯಲ್ಲಿ ನೆರವೇರಲಿದ್ದು, ಈ ಬಗ್ಗೆ ಭಾಲ್ಕಿ ಕಾಂಗ್ರೆಸ್ ಹಾಗೂ ಈಶ್ವರ್ ಖಂಡ್ರೆ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.