ಬ್ರೋ ಗೌಡರನ್ನು ಉಳಿಸಿಕೊಳ್ಳಲು ಸಹ ಸ್ಪರ್ಧಿಗಳ ತ್ಯಾಗ

Date:

ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಸ್ಪರ್ಧಿಗಳು ಏನು ಮಾತನಾಡಿದರೂ ಕೂಡ ಅದು ಬಿಗ್ ಬಾಸ್ ಹಾಗೂ ವೀಕ್ಷಕರಿಗೆ ಸರಿಯಾಗಿ ಕೇಳಬೇಕು ಅಂತ ಮೈಕ್ ನೀಡಲಾಗುತ್ತದೆ. ಮೈಕ್ ಇಲ್ಲದೆ ಯಾವ ಸ್ಪರ್ಧಿಯೂ ಮಾತನಾಡುವಂತಿಲ್ಲ. ಆದರೆ ಕಿವಿಯಲ್ಲಿ ಮಾತನಾಡಿದರೆ ಬಿಗ್ ಬಾಸ್‌ಗೆ ಕೇಳಿಸುವುದೇ?

ಇತ್ತೀಚೆಗೆ ಸ್ಪರ್ಧಿಗಳು ಕಿವಿಯಲ್ಲಿ ಮಾತನಾಡುತ್ತಿದ್ದಾರೆ. ಇದರಿಂದಾಗಿ ಸ್ಪರ್ಧಿಗಳು ಏನು ಮಾತನಾಡುತ್ತಿದ್ದಾರೆ? ಎಂಬುದು ಬಿಗ್ ಬಾಸ್, ಪ್ರೇಕ್ಷಕರ ಅರಿವಿಗೆ ಬರುವುದಿಲ್ಲ. ಹೀಗಾಗಿ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಿಗೆ ವಾರ್ನಿಂಗ್ ಕೂಡ ನೀಡಿದ್ದಾರೆ. ಇನ್ನು ಕಿವಿಯಲ್ಲಿ ಮಾತನಾಡಿದ ಶಮಂತ್‌ಗೂ ಕೂಡ ಇದರ ಬಿಸಿ ತಟ್ಟಿದೆ. ಶಮಂತ್ ಮಾಡಿದ ತಪ್ಪಿನಿಂದ ಅವರು ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್ ಆಗುವ ಪರಿಸ್ಥಿತಿ ಕೂಡ ಬಂದಿತ್ತು.

ಬಿಗ್ ಬಾಸ್ ಸ್ಪರ್ಧಿಗಳ ಮನವಿ ಮಾಡಿಕೊಂಡ ಶಮಂತ್ ಬ್ರೊ ಗೌಡ ಅವರು “ನಾನು ಕಷ್ಟಪಟ್ಟು ಬಿಗ್‌ ಬಾಸ್ ಮನೆಗೆ ಬಂದಿದ್ದೇನೆ. ನಾನು ಬಿಗ್ ಬಾಸ್‌ಗೆ ಬಂದಿರೋದಕ್ಕಾಗಿ ನನ್ನ ತಂದೆ-ತಾಯಿ ಉಸಿರಾಡುತ್ತಿದ್ದಾರೆ. ಹೀಗಾಗಿ ದಯವಿಟ್ಟು ನನಗೆ ಇಲ್ಲಿ ಇರಲು ಅವಕಾಶ ಮಾಡಿಕೊಡಿ” ಅಂತ ಕೇಳಿಕೊಂಡಿದ್ದಾರೆ. ಆಗ ಎಲ್ಲರೂ ಬೆಡ್ ರೂಮ್ ಏರಿಯಾ ಬಿಟ್ಟುಕೊಡುವುದಾಗಿ ಹೇಳಿದ್ದಾರೆ. ಇದರಿಂದ ಶಮಂತ್ ಬಿಗ್ ಬಾಸ್ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ.

 

Share post:

Subscribe

spot_imgspot_img

Popular

More like this
Related

ಜಾರ್ಖಂಡ್‌ನಲ್ಲಿ ವೈದ್ಯಕೀಯ ನಿರ್ಲಕ್ಷ್ಯ — ರಕ್ತ ಪಡೆದ ಐದು ಮಕ್ಕಳಿಗೆ ಎಚ್‌ಐವಿ ಸೋಂಕು

ಜಾರ್ಖಂಡ್‌ನಲ್ಲಿ ವೈದ್ಯಕೀಯ ನಿರ್ಲಕ್ಷ್ಯ — ರಕ್ತ ಪಡೆದ ಐದು ಮಕ್ಕಳಿಗೆ ಎಚ್‌ಐವಿ...

ಬೆಳಿಗ್ಗೆ ಎದ್ದಾಕ್ಷಣ ಇವುಗಳನ್ನು ನೋಡಿದರೆ ಅದೃಷ್ಟ – ಆದರೆ ಈ ಕೆಲಸ ತಪ್ಪದೇ ಬಿಡಿ!

ಬೆಳಿಗ್ಗೆ ಎದ್ದಾಕ್ಷಣ ಇವುಗಳನ್ನು ನೋಡಿದರೆ ಅದೃಷ್ಟ – ಆದರೆ ಈ ಕೆಲಸ...

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ: HDK

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ:...

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ ಬಿಜೆಪಿಯವರಿಗೆ...