ಬೆಂಗಳೂರು: ಬ್ಲಾಕ್ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ವಾಹಿನಿ ನಿರೂಪಕಿ ದಿವ್ಯಾ ವಸಂತಾ ಅರೆಸ್ಟ್ ಆಗಿದ್ದಾಳೆ. ರಾಜ್ಯವೇ ಖುಷಿಕೊಡುವ ಸುದ್ದಿ ಎಂದು ಹೇಳಿ ವೈರಲ್ ಆಗಿದ್ದ ನಿರೂಪಕಿ ದಿವ್ಯ ವಸಂತಳನ್ನು ಜೀವನ್ ಭೀಮಾನಗರ ಪೊಲೀಸರು ಕೇರಳದಲ್ಲಿ ಬಂಧಿಸಿ ಕರೆತಂದಿದ್ದಾರೆ. ಈ ಹಿಂದೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವರನ್ನು ಪೊಲೀಸರು ಬಂದಿಸಿದ್ದರು.
ಬೆಂಗಳೂರಿನ ಇಂದಿರಾನಗರದಲ್ಲಿರುವ ಮಸಾಜ್ ಪಾರ್ಲರ್ & ಸ್ಪಾದ ವ್ಯವಸ್ಥಾಪಕನಿಗೆ ಬೆದರಿಗೆ 15 ಲಕ್ಷ ರೂಪಾಯಿ ಸುಲಿಗೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ ನಿರೂಪಕಿ ಹಾಗೂ ಕಲರ್ಸ್ ಕನ್ನಡದ ಗಿಚ್ಚಿ ಗಿಲಿಗಿಲಿ ಶೋನಲ್ಲಿ ಭಾಗಿಯಾಗಿದ್ದ ದಿವ್ಯ ವಸಂತ ಕೂಡ ಆರೋಪಿಯಾಗಿದ್ದಾರೆ. ಆಕೆಯ ಸ್ನೇಹಿತ ಸಂದೇಶ್ ಈಗಾಗಲೇ ಬಂಧಿತನಾಗಿದ್ದಾನೆ. ಅದರೊಂದಿಗೆ ರಾಜ್ ನ್ಯೂಸ್ ಸುದ್ದಿವಾಹಿನಿಯ ಕಾರ್ಯನಿರ್ವಾಹಕ ಅಧಿಕಾರಿ ರಾಜಾನುಕುಂಟೆ ವೆಂಕಟೇಶ್‌ನನ್ನು ಜೆಬಿ ನಗರ ಪೊಲೀಸರು ಬಂಧಿಸಿದ್ದಾರೆ. ಇದರ ನಡುವೆ ದಿವ್ಯಾ ವಸಂತ ಕೂಡ ಅರೆಸ್ಟ್ ಆಗಿದ್ದಾಳೆ.
ಬ್ಲಾಕ್ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣ: ದಿವ್ಯಾ ವಸಂತಾ ಅರೆಸ್ಟ್
Date: