No menu items!
10.9 C
Munich
Sunday, September 27, 2026

ಜೆಡಿಎಸ್ ರಾಜ್ಯಾಧ್ಯಕ್ಷರ ಆಯ್ಕೆ ಚುನಾವಣೆ ಮುಖಾಂತರ ನಡೆಯಲಿದೆ !

Must read

ರಾಮನಗರ: ಕುಮಾರಸ್ವಾಮಿ ಕೇಂದ್ರ ಮಂತ್ರಿ ಬಳಿಕ ರಾಜ್ಯಾಧ್ಯಕ್ಷ ಚರ್ಚೆ ನಡೀತಿದೆ. ಪಕ್ಷದ ನಿರ್ಣಯ ತೆಗೆದುಕೊಳ್ಳವ ನಿಟ್ಟಿನಲ್ಲಿ ತೀರ್ಮಾನ ಮಾಡಬೇಕು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ರಾಮನಗರದಲ್ಲಿ ಮಾತನಾಡಿದ ಅವರು, ಈ ಬಾರಿ ಜೆಡಿಎಸ್ ರಾಜ್ಯಾಧ್ಯಕ್ಷರ ಆಯ್ಕೆ ಚುನಾವಣೆ ಮುಖಾಂತರ ನಡೆಯಲಿದೆ. ಈ ಹಿಂದೆ ಆದಂತಹ ಗೊಂದಲ ಆಗಬಾರ್ದು ಅಂತ ಮುಖಂಡರು ನಿಶ್ಚಯ ಮಾಡಿದ್ದಾರೆ. ಹಾಗಾಗಿ ಪಕ್ಷವನ್ನು ಮುನ್ನೆಡಿಸುವ ನಿಟ್ಟಿನಲ್ಲಿ ಅರ್ಹ ಅಭ್ಯರ್ಥಿ ಅಧ್ಯಕ್ಷ ರಾಗಲಿದ್ದಾರೆ ಎಂದು ಹೇಳಿದರು.
ಇನ್ನೂ 2018‌ರ‌ಸಂದರ್ಭದಲ್ಲಿ ಸಿದ್ರಾಮಯ್ಯ ನಗರ ನಮ್ಮಪ್ಪನಾಣೆ ಕುಮಾರಸ್ವಾಮಿ ಸಿ ಎಂ ಆಗಲ್ಲ ಅಂದಿದ್ರು. ಫಲಿತಾಂಶ ಬಂದ‌ ನಂತರ ಡಿಕೆ ಶಿವಕುಮಾರ್ ,‌ಸಿದ್ರಾಮಯ್ಯ ಮನೆ ಬಾಗಿಲಿಗೆ ಬಂದಿದ್ರು, ಪಾಪಾ ಸಿದ್ರಾಮಯ್ಯ ಕೂಡ ಒಪ್ಪಿಕೊಂಡಿದ್ರು. ಯಾವಾಗ ಅವರು ಕುಮಾರಸ್ವಾಮಿ ಸಿ ಎಂ ಆಗಲ್ಲ ಅಂತಾರೋ ಅವಾಗಲೇ ಅವರು‌ ಸಿ ಎಂ ಆಗ್ತಾರೆ. ಯಾಕಂದ್ರೆ ಅವರ ಬಾಯಲ್ಲಿ ಕರಿ ಮಚ್ಚೆ ಇದೆ ಎಂದು ನಿಖಿಲ್ ಕುಮಾರಸ್ವಾಮಿ ವ್ಯಂಗ್ಯವಾಡಿದ್ರು.

- Advertisement -spot_img

More articles

- Advertisement -spot_img

Latest article