ಬ್ಲಿಂಕ್’ಗೆ ಬೊಂಬಾಟ್ ರೆಸ್ಪಾನ್ಸ್..!

Date:

ಕನ್ನಡ ಸಿನಿಮಾಗಳನ್ನು ಕಣ್ತುಂಬಿಕೊಳ್ಳೋದಿಕ್ಕೆ ಜನ ಥಿಯೇಟರ್ ನತ್ತ ಹೆಜ್ಜೆ ಇಡ್ತಿಲ್ಲ. ಅದರ ನಡುವೆಯೇ ಒಂದಷ್ಟು ವಿಭಿನ್ನ ಪ್ರಯತ್ನಗಳ ಸಿನಿಮಾಗಳು ಎಲ್ಲರ ಗಮನಸೆಳೆಯುತ್ತಿವೆ. ಆ ಪ್ರಯತ್ನಗಳಲ್ಲಿ ಒಂದು ಬ್ಲಿಂಕ್. ಸದ್ಯ ಕನ್ನಡ ‘ಬ್ಲಿಂಕ್’ ಸಿನಿಮಾ ಹೊಸ ಸಾಧನೆ ಮಾಡಿದೆ. ಆ ಸಾಧನೆಗೆ ಕನ್ನಡ ಸಿನಿಮಾಪ್ರೇಮಿಗಳೇ ಕಾರಣ..

ಶಿವರಾತ್ರಿ ಹಬ್ಬದಂದು ಸೂಪರ್ ಸ್ಟಾರ್ಸ್ ಸಿನಿಮಾಗಳ ಮಧ್ಯೆ ತೆರೆಗೆ ಬಂದ ಬ್ಲಿಂಕ್ ಸಿನಿಮಾಗೆ ಪ್ರಾರಂಭದಲ್ಲಿ ಅಷ್ಟಾಗಿ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಆ ನಂತರ ಮೌತ್ ಪಬ್ಲಿಸಿಟಿಯಿಂದ ಬ್ಲಿಂಕ್ ಶೋಗಳು ಏರಿಕೆಯಾಗುತ್ತಾ ಹೋದ್ವು. ಕನ್ನಡ ಸಿನಿಮಾಗಳಿಗೆ ಶೋ ಸಿಕ್ತಿಲ್ಲ ಎಂಬ ಆಪವಾದದ ನಡುವೆ 8 ಶೋಗಳಿಂದ 82 ಶೋ ಬ್ಲಿಂಕ್ ಪಾಲಾಗಿದೆ. ಇದಕ್ಕೆ ಕನ್ನಡ ಪ್ರೇಕ್ಷಕನ ಬೆಂಬಲ ಕಾರಣ..

ಶಿವಣ್ಣ ಬ್ಲಿಂಕ್ ಸಿನಿಮಾಗೆ ಸಿಗುತ್ತಿರುವ ರೆಸ್ಪಾನ್ಸ್ ನೋಡಿ ಸೋಷಿಯಲ್ ಮೀಡಿಯಾದಲ್ಲಿ ಚಿತ್ರ ನೋಡುವ ಇಂಗಿತ ವ್ಯಕ್ತಪಡಿಸಿದ್ದರು. ಸಿಂಪಲ್ ಸುನಿ, ನವೀನ್ ಶಂಕರ್ ಹಾಗೂ ನಟಿ ಬೃಂದಾ ಆಚಾರ್ ಸೇರಿದಂತೆ ಹಲವಾರು ಕನ್ನಡ ತಾರೆಯರು ಬ್ಲಿಂಕ್ ಗೆ ಬಹುಪರಾಕ್ ಎಂದಿದ್ದರು.

ಶ್ರೀನಿಧಿ ಬೆಂಗಳೂರು ನಿರ್ದೇಶನದ ‘ಬ್ಲಿಂಕ್’ ಚಿತ್ರಕ್ಕೆ ರವಿಚಂದ್ರ ಎ. ಜೆ ಬಂಡವಾಳ ಹೂಡಿದ್ದಾರೆ. ದೀಕ್ಷಿತ್ ಶೆಟ್ಟಿ, ಚೈತ್ರಾ ಆಚಾರ್, ಗೋಪಾಲ ದೇಶಪಾಂಡೆ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.

ಒಂದ್ಕಡೆ ಬ್ಲಿಂಕ್ ಸಿನಿಮಾಗಳು ಹೆಚ್ಚಾಗಿರುವ ಖುಷಿ ನಡುವೆಯೇ ವಿದೇಶದಲ್ಲಿಯೂ ಚಿತ್ರ ತೆರೆಕಂಡಿದೆ. ಇಂದಿನಿಂದ ಆಸ್ಟ್ರೇಲಿಯಾ, ಯುಎಸ್ ಹಾಗೂ ಐರ್ಲೆಂಡ್ ಬ್ಲಿಂಕ್ ಬಿಡುಗಡೆಯಾಗಿದೆ. ಯುಕೆ, ಯೂರೋಪ್, ನ್ಯೂಜಿಲೆಂಡ್, ಯುಎಸ್, ಸಿಂಗಾಪುರ್, ಮಲೇಷಿಯಾ, ಜರ್ಮನ್, , ಕೆನಡಾ, ಫ್ರಾನ್ಸ್ ಸೇರಿದಂತೆ ಹಲವು ದೇಶಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.

Share post:

Subscribe

spot_imgspot_img

Popular

More like this
Related

ಮಂಡ್ಯದಲ್ಲಿ ಮನಕಲಕುವ ಘಟನೆ: ಸಾವಿನಲ್ಲೂ ಒಂದಾದ ದಂಪತಿ

ಮಂಡ್ಯದಲ್ಲಿ ಮನಕಲಕುವ ಘಟನೆ: ಸಾವಿನಲ್ಲೂ ಒಂದಾದ ದಂಪತಿ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ...

ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಅರೆಸ್ಟ್!

ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಅರೆಸ್ಟ್!ಬೆಂಗಳೂರು: ಐಷಾರಾಮಿ ಜೀವನಕ್ಕಾಗಿ ಕಳ್ಳತನ...

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ. ಶಿವಕುಮಾರ್

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ....

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ: ಸಾಧಿಸಿ ತೋರಿಸಿ: ಸಿ.ಎಂ ಸಿದ್ದರಾಮಯ್ಯ ಕರೆ

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ:...