No menu items!
9.3 C
Munich
Wednesday, April 29, 2026

ದಲಿತ ಸಮುದಾಯ ಮನಸ್ಸು ಮಾಡಿದ್ರೆ ರಾಜಕೀಯದಲ್ಲಿ ಬದಲಾವಣೆ ತರಬಹುದು !

Must read

ಹಾಸನ: , ದಲಿತ ಸಮುದಾಯ ಮನಸ್ಸು ಮಾಡಿದರೇ ರಾಜಕೀಯದಲ್ಲಿ ಬದಲಾವಣೆ ತರಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಹೇಳಿದರು. ಹಾಸನದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಲಿತ ಸಮುದಾಯ ಮನಸ್ಸು ಮಾಡಿದರೇ ರಾಜಕೀಯದಲ್ಲಿ ಬದಲಾವಣೆ ತರಬಹುದು. ಶಿವಲಿಂಗೇಗೌಡರ ಕ್ಷೇತ್ರದಲ್ಲಿ 20 ಸಾವಿರ ಒಕ್ಕಲಿಗರು ಇರಬಹುದು.
ದಲಿತರು ಮನಸ್ಸು ಮಾಡಿದರೇ ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ನಾನು ಮತ್ತು ಶಿವಲಿಂಗೇಗೌಡರೇ ಉದಾಹರಣೆ. ಪುಟ್ಟಸ್ವಾಮಿ ಎಂದರೆ ದೇವರಂತಹ ಮನುಷ್ಯ. ಅಂತಹ ಕುಟುಂಬದಿಂದ ಅವರ ಮೊಮ್ಮಗ ಚುನಾವಣೆಗೆ ಬಂದಿರುವುದು ನಮ್ಮ ಸೌಭಾಗ್ಯ. ಕಾಂಗ್ರೆಸ್ ನಿಂದ ಐದು ಗ್ಯಾರಂಟಿ ನೀಡಲಾಗಿದ್ದು, ಬಡ ಕುಟುಂಬಗಳಿಗೆ ಅನುಕೂಲವಾಗಿದೆ ಎಂದರು.
ಅನ್ನ ಭಾಗ್ಯ ಯೋಜನೆ, ಗೃಹ ಲಕ್ಷ್ಮಿ, ಸೇರಿದಂತೆ ಹತ್ತು ಹಲವಾರು ಯೋಜನೆಗಳನ್ನು ಜಾರಿ ಮಾಡಿ ಜನರ ಆಶೀರ್ವಾದ ಸಿಕ್ಕಿದೆ. ನಾನು ದೇವೇಗೌಡರ ಬಗ್ಗೆ ಟೀಕೆ ಮಾಡುವುದಿಲ್ಲ. ದಲಿತ ಸಮಾಜವಾಗಲಿ, ಯಾರೆ ಆಗಲಿ. ಕೆಳವರ್ಗ ಮತ್ತು ಮೇಲ್ವರ್ಗ ಎಂದು ಯಾರು ಮಾತನಾಡಬೇಡಿ. ಮಾತನಾಡಿದರೆ ನನಗೆ ಕೋಪ ಬರುತ್ತದೆ ಎಂದು ಸಭೆಯಲ್ಲಿ ಮಾತನಾಡಿದ ದಲಿತ ಮುಖಂಡರ ಬಗ್ಗೆ ಬೇಸರ ವ್ಯಕ್ತಪಡಿಸಿದರು.

- Advertisement -spot_img

More articles

- Advertisement -spot_img

Latest article