ಅಣ್ಣಾವ್ರಿಗೂ ಮಂತ್ರಾಲಯಕ್ಕೂ ಬಿಡಿಸಲಾರದ ನಂಟು ಎಂದೇ ಹೇಳಬಹುದು. ಮಂತ್ರಾಲಯದ ಗುರುರಾಯರು ಎಂದರೆ ಅಣ್ಣಾವ್ರಿಗೆ ಅಚ್ಚುಮೆಚ್ಚು. ರಾಯರನ್ನು ಆರಾಧಿಸುತ್ತಿದ್ದ ರಾಜಣ್ಣನವರು ಆಗಾಗ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದು ಧನ್ಯರಾಗುತ್ತಿದ್ದರು. ಇನ್ನೂ ಅಣ್ಣಾವ್ರು ಆಗಾಗ ಮಂತ್ರಾಲಯಕ್ಕೆ ಹೋಗಿ ಬರುವುದು ಮಾತ್ರವಲ್ಲದೆ ಮಂತ್ರಾಲಯಕ್ಕೆ ಹೋಗುವ ಭಕ್ತಾದಿಗಳಿಗೆ ನೆರವಾಗುವಂತೆ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ.

ಹೌದು ಮಂತ್ರಾಲಯಕ್ಕೆ ಹೋಗುವ ಭಕ್ತಾದಿಗಳಿಗೆ ಉಳಿದುಕೊಳ್ಳಲು ರಾಜಕುಮಾರ್ ಗೆಸ್ಟ್ ಹೌಸ್ ಎಂಬ ಗೆಸ್ಟ್ ಹೌಸ್ ಅನ್ನು ಅಣ್ಣಾವ್ರು ಕಟ್ಟಿಸಿದ್ದರು. ಆಗಿನ ಕಾಲಕ್ಕೆ ಮಂತ್ರಾಲಯದಲ್ಲಿ ನೆಲೆ ಇಲ್ಲದ ಭಕ್ತಾದಿಗಳಿಗೆ ರಾಜಕುಮಾರ್ ಗೆಸ್ಟ್ ಹೌಸ್ ನೆರಳಾಗಿತ್ತು. ಈಗಲೂ ಸಹ ರಾಜಕುಮಾರ್ ಗೆಸ್ಟ್ ಹೌಸ್ ಇದ್ದು ಹಲವಾರು ಭಕ್ತಾದಿಗಳು ಗೆಸ್ಟ್ ಹೌಸ್ ನ ಉಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ.






