ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ವಿಶ್ವಕಪ್ ಏಕದಿನ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯದೊಂದಿಗೆ ಶುಭಾರಂಭ ಮಾಡಿದೆ.
ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಅಜೇಯ ಶತಕ ಸಿಡಿಸಿದ್ದಾರೆ. 144 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ 13 ಬೌಂಡರಿ, 2 ಸಿಕ್ಸರ್ ಸಹಿತ 122 ರನ್ ಗಳಿಸಿದ್ದಾರೆ.
ಈ ಮೂಲಕ ಏಕದಿನ ಕ್ರಿಕೆಟ್ ನಲ್ಲಿ 23ನೇ ಶತಕ ದಾಖಲಿಸಿದ ಅವರು ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ದಾಖಲೆಯನ್ನು ಮುರಿದಿದ್ದಾರೆ. ಚೇಸಿಂಗ್ ವೇಳೆಯಲ್ಲಿ ರೋಹಿತ್ ಶರ್ಮಾ ಗಳಿಸಿದ ಶತಕಗಳ ಸಂಖ್ಯೆ 11 ಕ್ಕೆ ಏರಿಕೆಯಾಗಿದೆ.
ಭಾರತದ ಪರವಾಗಿ ಏಕದಿನ ಪಂದ್ಯಗಳಲ್ಲಿ ಹೆಚ್ಚು ಶತಕ ದಾಖಲಿಸಿದವರಲ್ಲಿ ಸಚಿನ್ ತೆಂಡೂಲ್ಕರ್ 49, ವಿರಾಟ್ ಕೊಹ್ಲಿ 41, ರೋಹಿತ್ ಶರ್ಮಾ 23, ಸೌರವ್ ಗಂಗೂಲಿ 22, ಶಿಖರ್ ಧವನ್ 16, ವೀರೇಂದ್ರ ಸೆಹ್ವಾಗ್ 15 ಶತಕ ಸಿಡಿಸಿದ್ದಾರೆ.
ಚೇಸಿಂಗ್ ವೇಳೆಯಲ್ಲಿ ಶತಕ ಗಳಿಸಿದವರಲ್ಲಿ ವಿರಾಟ್ ಕೊಹ್ಲಿ 25, ಸಚಿನ್ ತೆಂಡೂಲ್ಕರ್ 17, ಕ್ರಿಸ್ ಗೇಲ್ 12, ತಿಲಕರತ್ನೆ ದಿಲ್ಶಾನ್ ಮತ್ತು ರೋಹಿತ್ ಶರ್ಮಾ 11 ಶತಕ ಗಳಿಸಿದ್ದಾರೆ.