ಭಾರತದಲ್ಲಿವೆ ಅರಮನೆಗಳಿಗೆ ಸೆಡ್ಡು ಹೊಡೆಯುವ 24 ಶಾಲೆಗಳು ..!

0
429

ಭಾರತದಲ್ಲಿವೆ ಅರಮನೆಗಳಿಗೆ ಸೆಡ್ಡು ಹೊಡೆಯುವ 24 ಶಾಲೆಗಳು ..!

ನಮ್ಮ ಸುತ್ತ-ಮುತ್ತ ಇರೋ ದುಸ್ಥಿತಿಯಲ್ಲಿನ ಶಾಲೆಗಳನ್ನು ನೋಡಿದ್ದೀವಿ. ವಾವ್ ಅನ್ನುವಂಥಾ ದೊಡ್ಡ ದೊಡ್ಡ ಶಾಲೆಗಳನ್ನೂ ಕಂಡಿದ್ದೀವಿ. ಆದರೆ ಯಾವ ರಾಜರ ಅರಮನೆಗೂ ಕಮ್ಮಿ ಇಲ್ಲ ಎಂಬಂತ ಶಾಲೆಗಳನ್ನು ನೋಡಿದ್ದೀವಾ? ಅಂಥಾ ಶಾಲೆಗಳು ಕೂಡ ಇವೆ.. ಅದೂ ನಮ್ಮ ಭಾರತದಲ್ಲೇ .. ನಮ್ಮಲ್ಲಿನ ಈ 24 ಶಾಲೆಗಳನ್ನು ನೋಡಿದ್ರೆ ನೀವು ನಿಬ್ಬೆರಗಾಗ್ತೀರಿ..!

ಲಾರೆನ್ಸ್ ಸ್ಕೂಲ್ ಲವ್ಡೇಲ್- ಊಟಿ..

lawrence-school-ooty
ಭಾರತದ ಅತೀ ದೊಡ್ಡ ಶಾಲೆಗಳಲ್ಲಿ ಒಂದಾಗಿರುವ ಊಟಿಯ ಈ ಶಾಲೆಯಲ್ಲಿ ಉತ್ತಮ ಗುಣ ಮಟ್ಟದ ವಿದ್ಯಾಭ್ಯಾಸದ ಜೊತೆಗೆ ವಿದ್ಯಾರ್ಥಿಗಳಿಗಾಗಿ ಬ್ಯಾಸ್ಕೆಟ್‍ಬಾಲ್ ಕೋರ್ಟ್, ಫುಟ್‍ಬಾಲ್ ಕೋರ್ಟ್, ಪ್ರತ್ಯೇಕ ಕ್ರಿಕೇಟ್ ಗ್ರೌಂಡ್ ಹೊಂದಿದ್ದು, ಅದರ ಜೊತೆಗೆ ಈ ಶಾಲೆಯಲ್ಲಿ ರೋಬೋಟಿಕ್ ಲ್ಯಾಬ್ ವ್ಯವಸ್ಥೆಯನ್ನೂ ಸಹ ನಿರ್ಮಾಣ ಮಾಡಲಾಗಿದೆ.
ಗುಡ್ ಶೆಫರ್ಡ್ ಇಂಟರ್‍ನ್ಯಾಷನಲ್ ಸ್ಕೂಲ್-ಊಟಿ..

beautiful-school-2
ಊಟಿಯ ಮತ್ತೊಂದು ಭವ್ಯವಾದ ಹಾಗೂ ಸುಂದರವಾದ ಶಾಲೆಗಳಲ್ಲಿ ಈ ಗುಡ್ ಶಫರ್ಡ್ ಶಾಲೆಯೂ ಒಂದು.. ಈ ಶಾಲೆಯ ವಿದ್ಯಾರ್ಥಿಗಳು ಕೇವಲ ಓದಿನಲ್ಲಿ ಮಾತ್ರವಲ್ಲ ಸಂಗೀತ, ಈಜು, ಕ್ರೀಡೆಯಲ್ಲೂ ಪ್ರಸಿದ್ದರು. ಅಷ್ಟೇ ಅಲ್ಲದೇ ಪ್ರಸ್ತುತದಲ್ಲಿರುವ ಸ್ಮಾರ್ಟ್ ಎಜುಕೇರ್ ಸಿಸ್ಟಮ್‍ನನ್ನೂ ಕೂಡ ಈ ಶಾಲೆ ಅಳವಡಿಸಿಕೊಂಡಿದೆ.
ಲಾರೆನ್ಸ್ ಸ್ಕೂಲ್ ಸನಾವರ್- ಶಿಮ್ಲಾ..

lawrence-sanawar
ಹಳೇಯ ಕಟ್ಟಡ ರೀತಿಯಲ್ಲಿ ಕಂಗೊಳಿಸುತ್ತಿರುವ ಈ ಶಾಲೆಯೂ ಕೂಡ ಭಾರತದ ಸುಂದರ ಶಾಲೆಗಳಲ್ಲಿ ಒಂದು..
ಸೆಂಟ್ ಪೌಲ್- ಡಾರ್ಜಲಿಂಗ್..

st-paul-darjeeling
ವಿಶಾಲವಾದ ಆಟದ ಮೈದಾನ ಹೊಂದಿರುವ ಈ ಸೆಂಟ್ ಪೌಲ್ ಶಾಲೆ ಪ್ರಾರಂಭದಲ್ಲಿ ಇದು ಬಡ ವಿದ್ಯಾರ್ಥಿಗಳಿಗಾಗಿ ನಿರ್ಮಾಣವಾಗಿದ್ದು, ಆದರೆ ಈಗ ಈ ಶಾಲೆಯಲ್ಲಿ ವ್ಯಾಸಾಂಗ ಮಾಡ್ತಾ ಇರೋ ಎಲ್ಲಾ ವಿದ್ಯಾರ್ಥಿಗಳು ಶ್ರೀಮಂತ ಮನೆತನದವರು…
ಮೇಯೋ ಕಾಲೇಜ್- ಅಜ್ಮೀರ್..

mayo-college-ajmer
ಪ್ರಿನ್ಸ್ ಆಫ್ ಆಲ್ವಾರ್ ಕಾಲಾವಧಿಯಲ್ಲಿ ನಿರ್ಮಾಣ ಮಾಡಲಾದ ಈ ಶಾಲೆಯು ಕ್ರೀಡೆಗೆ ಹೆಸರುವಾಸಿಯಾದ ಶಾಲೆ. ಇಲ್ಲಿ ಪೋಲೋ ಮತ್ತು ಗಾಲ್ಫ್ ಕ್ರೀಡೆಯನ್ನು ಪ್ರತ್ಯೇಕ ಸಿಲಬರ್ಸ್ ಆಗಿ ಹೇಳಿಕೊಡಲಾಗ್ತಾ ಇದೆ.
ಡೂನ್ ಸ್ಕೂಲ್..

doon-school
ಭಾರತದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗಿರುವ ಈ ಡೂನ್ ಶಾಲೆ ಇಂದಿಗೂ ವಿದ್ಯಾರ್ಥಿಗಳ ನೆಚ್ಚಿನ ಶಾಲೆ. ಸುಮಾರು 70 ಎಕರೆ ಭೂ ವಿಸ್ತೀರ್ಣ ಹೊಂದಿರುವ ಈ ಶಾಲೆಯೂ ಕೂಡ ಕ್ರೀಡಾ ವಿಭಾಗದಲ್ಲಿ ಎತ್ತಿದ ಕೈ..
ಸೆಂಟ್ ಬೆಡ್ಸ್- ಶಿಮ್ಲಾ..

st-bedes
ಸುತ್ತಲೂ ಹಸಿರಿನಿಂದ ಕಂಗೊಳಿಸ್ತಾ ಇರೋ ಸೆಂಟ್ ಬೆಡ್ಸ್ ಶಾಲೆ ಒಂದು ಸೆಂಟ್ರಲ್ ಬೋರ್ಡಿಂಗ್ ಶಾಲೆ. ಈ ಶಾಲೆಯ ಸುತ್ತ ಎಷ್ಟರ ಮಟ್ಟಗೆ ಹಸಿರಿನಿಂದ ಕಂಗೊಳಿಸ್ತಾ ಇದೆ ಅಂದ್ರೆ ಶಾಲೆಯ ಗೋಡೆಯ ಮೇಲೂ ಸಹ ಗಿಡ-ಗಂಟೆಗಳಿಂದ ಶೃಂಗಾರಗೊಂಡಿದೆ ನೋಡಿ…!
ಹೆರಿಟೇಜ್ ಸ್ಕೂಲ್- ತಾಲೆಗಾಂವ್..

heritage-school-talegaon
ಆಕರ್ಷಕ ಶೈಲಿಯಲ್ಲಿ ನಿರ್ಮಾಣವಾಗಿರೋ ಈ ಶಾಲೆ ಪುಣೆ ಹೊರವಲಯವಾದ ಹಸ್ಲೆ ನಗರದಲ್ಲಿ ನಿರ್ಮಾಣ ಮಾಡಲಾಗಿದೆ. ಅತ್ಯಾಧುನಿಕ ಸೌಲಭ್ಯವನ್ನು ಹೊಂದಿರುವ ಈ ಶಾಲೆಯಲ್ಲಿ ಪ್ರತ್ಯೇಕ ಕೆಫೆಟೇರಿಯಾ ಹಾಗೂ ಲಾಂಡ್ರಿ ವ್ಯವಸ್ಥೆಯನ್ನು ಹೊಂದಿದೆ.
ಮೌಂಟ್‍ಫೋರ್ಟ್ ಸ್ಕೂಲ್_ ಯಾರ್ಕುಡ್..

montfort-school
ಪ್ರಕೃತಿ ಸೌಂದರ್ಯದ ಮಧ್ಯೆ ಕಂಗೊಳಿಸುತ್ತಿರುವ ಯಾರ್ಕುಡ್ ಶಾಲೆ ತುಂಬ ಸುಂದರವಾಗಿ ನಿರ್ಮಿಸಲಾಗಿದೆ. ವಿಷೇಶ ಅಂದ್ರೆ ಈ ಶಾಲೆ ನಿರ್ಮಾಣವಾಗಿರುವ ಸ್ಥಳ ಹೆಚ್ಚು ನವಿಲು ಹಾಗೂ ವಿಧ ವಿಧದ ಚಿಟ್ಟೆಗಳಿರುವ ಪ್ರದೇಶದಲ್ಲಿ. ಜನ ನಿಭಿಡ ಪ್ರದೇಶದಲ್ಲೂ ನವಿಲುಗಳು ಯಾವ ಭಯವಿಲ್ಲದೇ ಓಡಾಡೋದು ಇಲ್ಲಿನ ಇನ್ನೊಂದು ವಿಶೇಷತೆ.
ವಿಂಬರ್ಗ್-ಅಲ್ಲೆನ್ ಸ್ಕೂಲ್- ಮಸ್ಸೂರಿ..

beautiful-schools-1
ಸುಮಾರು 35 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರೋ ವಿಂಬರ್ಗ್ ಅಲೆನ್ ಸ್ಕೂಲ್, ಮಸ್ಸೂರಿ ಬೆಟ್ಟಗಳ ನಡುವೆ ನಿರ್ಮಾಣ ಮಾಡಲಾಗಿದೆ. ಈ ಶಾಲೆಯಲ್ಲಿ ಸ್ಕೇಟಿಂಗ್ ಹಾಗೂ ವ್ಯಾಯಾಮ ಶಾಲೆಗಳನ್ನು ಪ್ರತ್ಯೇಕವಾಗಿ ಹೇಳಿಕೊಡಲಾಗುತ್ತಿದೆ.
ಕಸಿಗಾ ಸ್ಕೂಲ್- ಡೆಹ್ರಾಡುನ್..

rasiga
ವಿಶ್ವದ ನಾನಾ ಭಾಗಗಳ ಶ್ರೀಮಂತ ಮನೆತನದ ಮಕ್ಕಳು ಈ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದು, ಸ್ಟೇಡಿಯಂನಷ್ಟೇ ವಿಸ್ತಾರವಾಗಿರುವ ಕ್ರಿಕೇಟ್ ಗ್ರೌಂಡ್ ಸೇರಿದಂತೆ ಅತ್ಯಾಧುನಿಕ ಐಷಾರಾಮಿ ವ್ಯವಸ್ಥೆಯನ್ನು ಈ ಶಾಲೆ ಒಳಗೊಂಡಿದೆ.
ಜಯಶ್ರೀ ಪೆರಿವಾಲ್ ಇಂಟರ್‍ನ್ಯಾಷನಲ್ ಸ್ಕೂಲ್- ಜೈಪುರ್..

jayshree-periwal-school-jaipur
ಜಯಶ್ರೀ ಪೆರಿವಾಲ್ ಶಾಲೆ ಒಂದು ರೀತಿಯಲ್ಲಿ ಪರಿಸರ ಸ್ನೇಹಿ ಶಾಲೆ ಅಂದ್ರೆ ತಪ್ಪಾಗೊಲ್ಲಾ. ಈ ಶಾಲೆಯಲ್ಲಿ ಪರಿಸದಿಂದ ಉತ್ಪಾದಿಸಲ್ಪಟ್ಟ ಸೋಲಾರ್ ವ್ಯವಸ್ಥೆ ಹಾಗೂ ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಒಳಗೊಂಡಿದೆ. ಅಲ್ಲದೇ ಹವಾ ನಿಯಂತ್ರಿತ ಒಳಾಗಣ ಈಜುಕೊಳ ಹಾಗೂ ವ್ಯವಸ್ಥಿತವಾದ ಹಾರ್ಸ್ ರೈಡಿಂಗ್‍ನ್ನೂ ಸಹ ವಿದ್ಯಾರ್ಥಿಗಳಿಗೆ ಹೇಳಿ ಕೊಡಲಾಗ್ತಾ ಇದೆ.
ಬಿಷಪ್ ಕಾಟನ್ ಸ್ಕೂಲ್- ಶಿಮ್ಲಾ..

bishop-cotton-shimla
1859ರಲ್ಲಿ ನಿರ್ಮಾಣವಾದ ಈ ಶಾಲೆ ಏಷ್ಯಾದ ಅತ್ಯಂತ ಹಳೇಯ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೇ ರಾಜ್ಯದಲ್ಲೇ ಸುಪ್ರಸಿದ್ದ ವ್ಯಾಯಾಮ ಶಾಲೆ ಹೊಂದಿರುವ ಶಾಲೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಡ್ರಕ್ ವೈಟ್ ಲೋಟಸ್ ಸ್ಕೂಲ್- ಲೆಹ್..

druk-white-lotus-school
ಟಿಬೇಟಿಯನ್ ಸನ್ಯಾಸಿಗಳ ಗೋಲ್ಡನ್ ಟೆಂಪಲ್ ರೀತಿಯಲ್ಲಿ ನಿರ್ಮಿತವಾಗಿರುವ ಈ ಶಾಲೆ ಸ್ವಲ್ಪ ಸರಳವಾದರೂ ನೋಡೋಕೆ ತುಂಬಾ ಸೊಗಸಾಗಿದೆ.
ವೆಲ್ಹಮ್ ಗಲ್ರ್ಸ್ ಸ್ಕೂಲ್- ಡೆಹ್ರಾಡೂನ್..

welham-girls-school
ಬಾಲಕೀಯರ ಶಾಲೆಯಲ್ಲಿ ವಿಶ್ವದಲ್ಲೇ ಉನ್ನತ ಹೆಸರುಗಳಿಸಿರೋ ಈ ಶಾಲೆಯು ಹೆಣ್ಣು ಮಕ್ಕಳ ಮುಕ್ತ ಆಲೋಚನೆಗೆ ಅವಕಾಶ ಕಲ್ಪಿಸಿಕೊಟ್ಟಿದೆ.
ರಾಜ್‍ಕುಮಾರ್ ಕಾಲೇಜ್- ರಾಜ್‍ಕೋಟ್..

rajkumar-rajkot-school
ಮೇಯೋ ಸ್ಕೂಲ್‍ನಂತೆಯೇ ಈ ಶಾಲೆಯು ಸ್ಥಾಪನೆ ಮಾಡಿದ್ದು ಶ್ರೀಮಂತ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಈ ಭವ್ಯವಾದ ಶಾಲೆಯಲ್ಲಿ ಮಕ್ಕಳಿಗೆ ನೀಡಿರುವ ಮೊದಲ ಆದ್ಯತೆ ಕಲೆಗೆ…
ಸೆಂಟ್ ಜೋಸೆಫ್ ಕಾಲೇಜ್- ನೈನಿತಾಲ್..

sherwood-school-nainital
1869ರಲ್ಲಿ ಸ್ಥಾಪನೆಯಾದ ಈ ಶಾಲೆ ಭಾರತದಲ್ಲೇ ಅತೀ ದೊಡ್ಡ ಗ್ರಂಥಾಲಯವನ್ನು ಹೊಂದಿದ ಕಾಲೇಜ್ ಎಂದು ಹೆಸರುಗಳಿಸಿದೆ. ಅದೇ ರೀತಿ ಉತ್ತಮ ಕಂಪ್ಯೂಟರ್ ಲ್ಯಾಬ್ ಸಹ ಒಳಗೊಂಡಿದೆ.
ಬ್ಲ್ಯೂ ಮೌಂಟೇನ್ ಸ್ಕೂಲ್- ಊಟಿ..

blue-mountain
ಬೇರೆಲ್ಲಾ ಶಾಲೆಗಳಂತೆ ಬಹಳ ವಿಸ್ತಾರವಾದ ಜಾಗವನ್ನು ಹೊಂದದೇ ಇದ್ದರೂ ಸಹ ಊಟಿಯ ಸುಂದರ ಪ್ರದೇಶಲ್ಲಿ ನಿರ್ಮಾಣವಾಗಿರೋ ಬ್ಲ್ಯೂ ಮೌಂಟೇನ್ ಶಾಲೆ, ತನ್ನ ಚಿಕ್ಕ ಆಟದ ಮೈದಾನದಲ್ಲೇ ಈ ಶಾಲೆ ಕ್ರೀಡಾ ವಿಭಾಗದಲ್ಲಿ ಸಾಕಷ್ಟು ಸಾಧನೆಯನ್ನು ಮಾಡಿದೆ.
ಡೇಲಿ ಕಾಲೇಜ್- ಇಂದೋರ್..

daly-college-indore
1870ರ ಹಿಂದೆಯೇ ನಿರ್ಮಾಣ ಮಾಡಲಾಗಿದೆ ಎನ್ನಲಾದ ಡೈಲಿ ಕಾಲೇಜ್‍ನ್ನು ಅಂದಿನ ಭಲವರ್ಧಿತ ಸಿಮೆಂಟ್‍ನಿಂದ ಈ ಶಾಲೆ ನಿರ್ಮಾಣ ಮಾಡಲಾಗಿದೆ. ಭಾರತದ ಐಷಾರಾಮಿ ಶಾಲೆಗಳಲ್ಲಿ ಒಂದಾದ ಈ ಶಾಲೆಯೂ ಕೂಡ ಕ್ರೀಡಾ ವಿಭಾಗದಲ್ಲಿ ಮಹತ್ತರ ಸಾಧನೆ ಮಾಡಿದೆ..
ಸೆಂಟ್ ಜಾರ್ಜ್ ಕಾಲೇಜ್- ಮಸ್ಸೂರಿ..

st-george
ಸುಮಾರು 400ಕ್ಕೂ ಅಧಿಕ ಎಕ್ಟೇರ್ ಪ್ರದೇಶವನ್ನು ಒಳಗೊಂಡಿರುವ ಬಹುದೊಡ್ಡ ರೆಸಿಡೆನ್ಸಿಯಲ್ ಕ್ಯಾಂಪಸ್ ಇದಾಗಿದ್ದು, ಈಜು ಕೊಳ, ವ್ಯಾಯಾಮ ಶಾಲೆ ಹಾಗೂ ವಿಶ್ವ ದರ್ಜೆಯ ಆಸ್ಪತ್ರೆಯನ್ನೂ ಸಹ ಈ ಕ್ಯಾಂಪಸ್‍ನ ಒಳಭಾಗದಲ್ಲಿ ನಿರ್ಮಾಣವಾಗಿದೆ.
ಹುಡ್‍ಸ್ಟೋಕ್ ಸ್ಕೂಲ್- ಮಸ್ಸೂರಿ..

woodstock1
ಭಾರತದ ಅತೀ ವಿಸ್ತಾರವಾದ ಹಾಗೂ ವಿದ್ಯಾರ್ಥಿಗಳಿಗೆ ಬಹಳ ಆರಾಮದಾಯಕವಾದ ಈ ಶಾಲೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಪ್ರತ್ಯೇಕ ಕೊಠಡಿಗಳನ್ನು ಈ ಶಾಲೆ ಒಳಗೊಂಡಿದೆ. ಇನ್ನು ಕ್ರೀಡಾ ವಿಭಾಗಕ್ಕೆ ಬಂದರೆ ವಿಶ್ವ ದರ್ಜೆ ಗುಣಮಟ್ಟದ ಸೌಲಭ್ಯಗಳನ್ನು ಈ ಶಾಲೆಯಲ್ಲಿ ಕಾಣ್ಬೋದು.. ಬೆಟ್ಟದ ತುತ್ತ ತುದಿಯಲ್ಲಿ ನಿರ್ಮಾಣವಾಗಿರೋ ಈ ಶಾಲೆಯ ಸುತ್ತಲೂ ದಟ್ಟ ಅರಣ್ಯದಿಂದ ಆವೃತವಾಗಿದೆ.
ರಾಮಕೃಷ್ಣ ಮಿಷನ್ ವಿದ್ಯಾಪೀಠ- ದೋಘರ್..

ramakrishna-school
ಉನ್ನತ ಗುಣಮಟ್ಟದ ಶಿಕ್ಷಕರನ್ನು ಒಳಗೊಂಡಿರುವ ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡುತ್ತಾ ಬಂದಿದೆ. ದೇಶ ವಿದೇಶಗಳಿಂದ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಮೆಡಿಕಲ್ ಹಾಗೂ ಇಂಜಿನೀಯರಿಂಗ್ ಸ್ಟಡೀಸ್ ಮಾಡ್ತಾ ಇದಾರೆ..
ನೇತರಾತ್ ವಿದ್ಯಾಲಯ- ಝಾರ್ಖಂಡ್..

jharkhand-school
ಈ ಶಾಲೆಯಲ್ಲಿ ಓದಿದವರೆಲ್ಲರೂ ರಾಜ್ಯದಲ್ಲೇ ಟಾಪರ್ ಆಗಿ ಹೊರ ಹೊಮ್ಮುತ್ತಿದ್ದಾರೆ. ಅಂತರ್ ಶಾಲಾ ಕಾಂಪಿಟೇಷನ್‍ನಲ್ಲಿ ಈ ಶಾಲೆಯ ವಿದ್ಯಾರ್ಥಿಗಳಿಗೆ ಸವಾಲು ಹಾಕೋ ಇನ್ಯಾವ ಶಾಲೆಯೂ ಮುಂದೆ ಬಂದಿಲ್ಲ ನೋಡಿ…
ಎಸ್‍ಜಿವಿಪಿ- ಅಹಮದಾಬಾದ್..

svgp-ahmedabad
ನೋಡೋಕೆ ಥೇಟ್ ಮಹಾರಾಜ ಪ್ಯಾಲೇಸ್‍ನಂತೆ ಕಂಗೊಳಿಸುತ್ತಿರೋ ಈ ಶಾಲೆಯು ಬಹಳ ಆಕರ್ಷಕವಾಗಿದೆ. ಇನ್ನು ಈ ಶಾಲೆಯಲ್ಲಿ ವ್ಯಾಸಾಂಗ ಮಾಡ್ತಾ ಇರುವ ಐಟಿ ಹಾಗೂ ಮಲ್ಟಿ ಮೀಡಿಯಾ ವಿದ್ಯಾರ್ಥಿಗಳ ವಿದ್ಯಾರ್ಥಿ ನಿಲಯವು ಫುಲ್ ಹವಾನಿಯಂತ್ರಿತದಿಂದ ಕೂಡಿದೆ…
ಈಗ ಹೇಳಿ ಸಾರ್ ನಿಮ್ಮ ಮಕ್ಕಳನ್ನ ಓದ್ಸೋಕೆ ಈ 24 ಶಾಲೆಗಳಲ್ಲಿ ಯಾವ ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದೀರಿ..?

 

LEAVE A REPLY

Please enter your comment!
Please enter your name here