ಭಾರತೀಯ ಕ್ರಿಕೆಟ್ನ ವೇಗದ ಬೌಲರ್ ಮೊಹಮ್ಮದ್ ಶಮಿಗೆ ಹೆಂಡ್ತಿ ಕಾಟ ಶುರುವಾಗಿದೆ. ಯಾವ ಮಟ್ಟಿಗೆ ಅಂದ್ರೆ, “ನನ್ನ ಪತ್ನಿಯಿಂದ ಪ್ರಾಣ ಭಯವಿದ್ದು ನನಗೆ ಗನ್ಮ್ಯಾನ್ ಸೆಕ್ಯೂರಿಟಿ ನೀಡಿ” ಎಂದು ಶಮಿ ಮುಂಬೈ ಪೊಲೀಸರಿಗೆ ಮನವಿ ಮಾಡಿದ್ದಾರೆ. ತಮ್ಮ ಮನವಿಯಲ್ಲಿ “ನನಗೆ ದಿನ ನಿತ್ಯ ಬೆದರಿಕೆ ಕರೆಗಳು ಬರುತ್ತಿವೆ” ಎಂದು ಕೂಡ ತಿಳಿಸಿದ್ದಾರೆ.
ಕಳೆದ ಅನೇಕ ತಿಂಗಳುಗಳ ಹಿಂದೆ ಕ್ರಿಕೆಟರ್ ಮೊಹಮ್ಮದ್ ಶಮಿ ಹಾಗೂ ಪತ್ನಿ ಹಸಿನಾ ಜಹಾನ್ ನಡುವೆ ಕುಟುಂಬ ಕಲಹ ಉಂಟಾಗಿತ್ತು. ಹೀಗಾಗಿ ಇಬ್ಬರು ದೂರವಾಗಿದ್ದರು. ಪತ್ನಿ ಹಸಿನಾ ಪರಿಹಾರವಾಗಿ ಪ್ರತಿ ತಿಂಗಳು 10 ಲಕ್ಷ ರೂಪಾಯಿ ನೀಡುವಂತೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ಅಂತಿಮವಾಗಿ ಶಮಿ, ಪ್ರತಿ ತಿಂಗಳು ಮಗಳ ಆರೈಕೆಗಾಗಿ 80 ಸಾವಿರ ರೂಪಾಯಿ ನೀಡುತ್ತಿದ್ದರು. ಇಷ್ಟಾದರೂ ಪತಿ ಪತ್ನಿಯ ನಡುವಿನ ಗಲಾಟೆ ಮಾತ್ರ ನಿಂತಿರಲಿಲ್ಲ. ಇದೆಲ್ಲದರ ನಡುವೆ ನನಗೆ ಪತ್ನಿಯಿಂದಲೇ ಜೀವ ಬೆದರಿಕೆ ಇದೆ ಎಂದು ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ದೂರು ನೀಡಿದ್ದಾರೆ. ಸೂಕ್ತ ಭದ್ರತೆ ಒದಗಿಸುವಂತೆ ಮುಂಬೈ ಪೊಲೀಸ್ ಹಾಗೂ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
Date: