ಭಾರತೀಯ ಕ್ರಿಕೆಟರ್ ಗೆ ಹೆಂಡ್ತಿ ಭಯ…!

Date:

ಭಾರತೀಯ ಕ್ರಿಕೆಟ್​ನ ವೇಗದ ಬೌಲರ್​ ಮೊಹಮ್ಮದ್​ ಶಮಿಗೆ ಹೆಂಡ್ತಿ ಕಾಟ ಶುರುವಾಗಿದೆ. ಯಾವ ಮಟ್ಟಿಗೆ ಅಂದ್ರೆ, “ನನ್ನ ಪತ್ನಿಯಿಂದ ಪ್ರಾಣ ಭಯವಿದ್ದು ನನಗೆ ಗನ್​ಮ್ಯಾನ್​ ಸೆಕ್ಯೂರಿಟಿ ನೀಡಿ” ಎಂದು ಶಮಿ ಮುಂಬೈ ಪೊಲೀಸರಿಗೆ ಮನವಿ ಮಾಡಿದ್ದಾರೆ. ತಮ್ಮ ಮನವಿಯಲ್ಲಿ “ನನಗೆ ದಿನ ನಿತ್ಯ ಬೆದರಿಕೆ ಕರೆಗಳು ಬರುತ್ತಿವೆ” ಎಂದು ಕೂಡ ತಿಳಿಸಿದ್ದಾರೆ.
ಕಳೆದ ಅನೇಕ ತಿಂಗಳುಗಳ ಹಿಂದೆ ಕ್ರಿಕೆಟರ್​ ಮೊಹಮ್ಮದ್​ ಶಮಿ ಹಾಗೂ ಪತ್ನಿ ಹಸಿನಾ ಜಹಾನ್​ ನಡುವೆ ಕುಟುಂಬ ಕಲಹ ಉಂಟಾಗಿತ್ತು. ಹೀಗಾಗಿ ಇಬ್ಬರು ದೂರವಾಗಿದ್ದರು. ಪತ್ನಿ ಹಸಿನಾ ಪರಿಹಾರವಾಗಿ ಪ್ರತಿ ತಿಂಗಳು 10 ಲಕ್ಷ ರೂಪಾಯಿ ನೀಡುವಂತೆ ನ್ಯಾಯಾಲಯದ​​ ಮೆಟ್ಟಿಲೇರಿದ್ದರು. ಆದರೆ ಅಂತಿಮವಾಗಿ ಶಮಿ, ಪ್ರತಿ ತಿಂಗಳು ಮಗಳ ಆರೈಕೆಗಾಗಿ 80 ಸಾವಿರ ರೂಪಾಯಿ ನೀಡುತ್ತಿದ್ದರು. ಇಷ್ಟಾದರೂ ಪತಿ ಪತ್ನಿಯ ನಡುವಿನ ಗಲಾಟೆ ಮಾತ್ರ ನಿಂತಿರಲಿಲ್ಲ. ಇದೆಲ್ಲದರ ನಡುವೆ ನನಗೆ ಪತ್ನಿಯಿಂದಲೇ ಜೀವ ಬೆದರಿಕೆ ಇದೆ ಎಂದು ಟೀಮ್ ಇಂಡಿಯಾ ವೇಗಿ ಮೊಹಮ್ಮದ್​​ ಶಮಿ ದೂರು ನೀಡಿದ್ದಾರೆ. ಸೂಕ್ತ ಭದ್ರತೆ ಒದಗಿಸುವಂತೆ ಮುಂಬೈ ಪೊಲೀಸ್​ ಹಾಗೂ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Share post:

Subscribe

spot_imgspot_img

Popular

More like this
Related

ಮತ್ತೆ ಇಳಿಕೆಯ ಹಾದಿಗೆ ಬಂದ ಚಿನ್ನ, ಬೆಳ್ಳಿ ಬೆಲೆ! ಹೀಗಿದೆ ದರ

ಮತ್ತೆ ಇಳಿಕೆಯ ಹಾದಿಗೆ ಬಂದ ಚಿನ್ನ, ಬೆಳ್ಳಿ ಬೆಲೆ! ಹೀಗಿದೆ ದರ ಬೆಂಗಳೂರು:...

ಕರ್ನಾಟಕದಲ್ಲಿ ಬಿಸಿಲು ಆರಂಭ: ಬೀದರ್, ಕಲಬುರಗಿಗೆ ಯೆಲ್ಲೋ ಅಲರ್ಟ್

ಕರ್ನಾಟಕದಲ್ಲಿ ಬಿಸಿಲು ಆರಂಭ: ಬೀದರ್, ಕಲಬುರಗಿಗೆ ಯೆಲ್ಲೋ ಅಲರ್ಟ್ ಬೆಂಗಳೂರು: ಮುಂಗಾರು ಹಾಗೂ...

ಮಂಡ್ಯದಲ್ಲಿ ಮನಕಲಕುವ ಘಟನೆ: ಸಾವಿನಲ್ಲೂ ಒಂದಾದ ದಂಪತಿ

ಮಂಡ್ಯದಲ್ಲಿ ಮನಕಲಕುವ ಘಟನೆ: ಸಾವಿನಲ್ಲೂ ಒಂದಾದ ದಂಪತಿ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ...

ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಅರೆಸ್ಟ್!

ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಅರೆಸ್ಟ್!ಬೆಂಗಳೂರು: ಐಷಾರಾಮಿ ಜೀವನಕ್ಕಾಗಿ ಕಳ್ಳತನ...