ಕ್ರಿಕೆಟ್ ಲೋಕದ ಅತಿದೊಡ್ಡ ಕಾದಾಟವೆಂದೇ ಹೇಳಲಾಗುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ವೀಕ್ಷಿಸಲು ಮನೆ ಮಂದಿ ಟಿವಿ ಮುಂದೆ ಕುಳಿತಿದ್ದಾರೆ.
ಇನ್ನು ಕೆಲವೆಡೆ ಗೆಳೆಯರೆಲ್ಲ ಒಂದೆಡೆ ಸೇರಿ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಹೋಟೆಲ್ ಗಳಲ್ಲಿ, ಕೆಲವೆಡೆ ಕ್ರಿಕೆಟ್ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಜನರೆಲ್ಲಾ ಟಿವಿ ಮುಂದೆ ಕುಳಿತಿದ್ದು, ಎಲ್ಲೆಡೆ ಬಂದ್ ವಾತಾವರಣ ಕಂಡು ಬಂದಿದೆ.
ಬಹುತೇಕ ರಸ್ತೆಗಳು ಬಿಕೋ ಎನ್ನುತ್ತಿವೆ. ಪ್ರಮುಖ ವಹಿವಾಟು ಕೇಂದ್ರಗಳು, ಮಾರುಕಟ್ಟೆಗಳಲ್ಲಿಯು ಜನ, ವಾಹನ ಸಂಚಾರ ವಿರಳವಾಗಿದೆ. ಮ್ಯಾಂಚೆಸ್ಟರ್ ನಲ್ಲಿ ನಡೆಯಲಿರುವ ಭಾರತ -ಪಾಕಿಸ್ತಾನ ತಂಡಗಳ ನಡುವಿನ ಪಂದ್ಯವನ್ನು ಅತಿಹೆಚ್ಚಿನ ಸಂಖ್ಯೆಯ ಜನ ವೀಕ್ಷಿಸುತ್ತಿದ್ದು, ಕೋಟ್ಯಂತರ ಅಭಿಮಾನಿಗಳು ಪೂಜೆ, ಪ್ರಾರ್ಥನೆ ಸಲ್ಲಿಸಿದ್ದಾರೆ.
ಮೊದಲೇ ಭಾನುವಾರ ರಜೆ ದಿನವಾಗಿದ್ದರಿಂದ ರಸ್ತೆಗಳು ಬಣಗುಡುತ್ತಿದ್ದವು. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಿಂದಾಗಿ ಕೆಲವೆಡೆ ರಸ್ತೆಗಳೇ ಖಾಲಿಯಾಗಿವೆ. ಕ್ರಿಕೆಟ್ ಅಭಿಮಾನಿಗಳೆಲ್ಲ ಮನೆಯಲ್ಲಿ ಕುಳಿತುಕೊಂಡಿದ್ದಾರೆ. ಬಹು ದಿನಗಳ ನಂತರ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿರುವುದು ಮತ್ತು ವಿಶ್ವಕಪ್ ಪಂದ್ಯವಾಗಿರುವುದರಿಂದ ಎಲ್ಲರಲ್ಲೂ ಕುತೂಹಲ ಮೂಡಿದೆ.