ಕ್ಷೇತ್ರದಲ್ಲಿ ಭರ್ಜರಿ ಜಯ ಸಾಧಿಸಿದ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ್‍ಗೆ ಅವರ ಅಭಿಮಾನಿ ಹಾಗೂ ದೇವಸಂದ್ರ ಮುಖಂಡರಾದ ಪ್ರದೀಪ್ ಯಾದವ್ ಅವರು ಒಂದು ಕೆ.ಜಿ.ಬೆಳ್ಳಿ ಕಿರೀಟವನ್ನು ಉಡುಗೊರೆಯಾಗಿ ನೀಡಿದರು. ಪ್ರದೀಪ್ ಯಾದವ್ ಅವರಿಗೆ ಇತ್ತೀಚೆಗಷ್ಟೇ ಶಸ್ತ್ರ ಚಕಿತ್ಸೆ ಯಾಗಿದ್ದರೂ ಸಹ ತಮ್ಮ ನೆಚ್ಚಿನ ನಾಯಕರಾದ ಬೈರತಿ ಬಸವರಾಜ ಅವರನ್ನು ಅಭಿನಂದಿಸಲೇ ಬೇಕೆಂದು ಭೈರತಿಯಲ್ಲಿರುವ ಅವರ ಮನೆಗೆ ತೆರಳಿ ಕಿರೀಟ ನೀಡಿ ಶುಭ ಕೋರಿದರು. ಪ್ರದೀಪ್ ಗೆ ಆರೋಗ್ಯ ಸಮಸ್ಯೆ ಇದ್ದರು ಸಹ ಪ್ರೀತಿ ಇಂದ ಬಂದು ಶುಭ ಕೋರಿದ್ದಕೆ ಬಸವರಾಜ್ ಅವರು ಧನ್ಯವಾದ ತಿಳಿಸಿದ್ದಾರೆ.
ಪ್ರದೀಪ್ ಯಾದವ್ ಅವರಿಗೆ ಶಸ್ತ್ರ ಚಿಕಿತ್ಸೆಯಾಗಿದ್ದರೂ ಸಹ ನನಗೆ ಶುಭ ಕೋರಲು ಆಗಮಿಸಿದ್ದಾರೆ ಅವರಿಗೆ ನನ್ನ ಧನ್ಯವಾದ ತಿಳಿಸುತ್ತೆನೆ ಎಂದು ಭೈರತಿ ಬಸವರಾಜ್ ಅವರು ಧನ್ಯವಾದ ತಿಳಿಸಿದ್ದಾರೆ.