ಮಂಡ್ಯದ ಗಂಡು ಚಿತ್ರದ ನಿರ್ದೇಶಕರ ಇಂದಿನ ಸ್ಥಿತಿ ನೋಡಿ

Date:

ಎ ಟಿ ರಘು.. ಮಂಡ್ಯದ ಗಂಡು ಎಂಬ ಸೂಪರ್ ಹಿಟ್ ಚಿತ್ರವನ್ನು ನೀಡಿದ್ದರು. ಈ ಚಿತ್ರದ ಬಳಿಕ ಅಂಬರೀಶ್ ಅವರನ್ನು ಎಲ್ಲರೂ ಮಂಡ್ಯದಗಂಡು ಎಂದೇ ಕರೆಯಲು ಶುರುಮಾಡಿದರು.. ಅಷ್ಟರಮಟ್ಟಿಗೆ ಅಂಬರೀಶ್ ಅವರಿಗೆ ಪ್ರಸಿದ್ಧಿಯನ್ನು ಈ ಚಿತ್ರ ತಂದುಕೊಟ್ಟಿತ್ತು. ಮೂವತ್ತಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡಿ ಯಶಸ್ವಿ ನಿರ್ದೇಶಕರಾಗಿದ್ದ ಎಟಿ ರಘು ಅವರ ಇಂದಿನ ಪರಿಸ್ಥಿತಿ ತೀರ ಹದಗೆಟ್ಟಿದೆ.

 

 

ಅನೇಕ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿರುವ ನಿರ್ದೇಶಕ ಎಟಿ ರಘು ಅವರು ಆರ್ಥಿಕ ಸಮಸ್ಯೆಯನ್ನು ಸಹ ಎದುರಿಸುತ್ತಿದ್ದಾರೆ. ಅಂಬರೀಶ್ ಅವರು ಬದುಕಿರುವವರೆಗೆ ಇವರ ಆರೋಗ್ಯದ ಖರ್ಚನ್ನು ಅವರೇ ನೋಡಿಕೊಳ್ಳುತ್ತಿದ್ದರು. ಅಂಬರೀಶ್ ಅವರ ನಿಧನದ ನಂತರ ಎಟಿ ರಘು ಅವರ ವೈದ್ಯಕೀಯ ವೆಚ್ಚವನ್ನು ಭರಿಸಲು ಯಾರು ಇಲ್ಲ. ಈ ದುಃಖಕರ ಸಂಗತಿಯನ್ನು ಸ್ವತಃ ಎಟಿ ರಘು ಅವರೇ ಹೇಳಿಕೊಂಡು ಕಣ್ಣೀರು ಹಾಕುತ್ತಿದ್ದರು.

 

ಈ ಸಮಯದಲ್ಲಿ ಎಟಿ ರಘು ಅವರ ನೆರವಿಗೆ ಬಂದಿದ್ದು ಕಿಚ್ಚ ಸುದೀಪ್. ನಿರ್ದೇಶಕ ಎ ಟ ರಘು ಅವರಿಗೆ ಕರೆ ಮಾಡಿದ ಕಿಚ್ಚ ಸುದೀಪ್ ಅವರು ನಿಮ್ಮ ಜೊತೆ ನಾವಿದ್ದೇವೆ ಧೈರ್ಯವಾಗಿರಿ ಎಂದು ಕಿಚ್ಚ ಸುದೀಪ್ ಅವರು ಎಟಿ ರಘು ಅವರಿಗೆ ಧೈರ್ಯವನ್ನು ತುಂಬಿದ್ದಾರೆ. ಇನ್ನು ಕಿಚ್ಚ ಸುದೀಪ್ ಅವರು ಕರೆ ಮಾಡಿದ ನಂತರ ಅವರಿಗೆ ಧನ್ಯವಾದ ತಿಳಿಸಿದ ಎಟಿ ರಘು ಅವರು ಅಂಬರೀಶ್ ಅವರನ್ನು ನಿಮ್ಮ ಮೂಲಕ ನಾನು ಕಾಣುತ್ತಿದ್ದೇನೆ ಅಂಬರೀಶ್ ಅವರೇ ನಿಮ್ಮನ್ನು ನನಗೆ ಸಹಾಯ ಮಾಡಲು ಕಳಿಸಿದ್ದಾರೆ ಎಂದು ಕಿಚ್ಚ ಸುದೀಪ್ ಅವರ ಸಹಾಯವನ್ನು ಹೊಗಳಿದರು.

 

 

 

ಒಟ್ಟಿನಲ್ಲಿ ಹಿರಿಯ ನಿರ್ದೇಶಕರೊಬ್ಬರು ಕಷ್ಟದ ಸಂದರ್ಭದಲ್ಲಿ ಕಿಚ್ಚ ಸುದೀಪ್ ಅವರ ಈ ನಡೆ ನಿಜಕ್ಕೂ ಗ್ರೇಟ್..

Share post:

Subscribe

spot_imgspot_img

Popular

More like this
Related

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ: ಶಿವಾನಂದ ಪಾಟೀಲ್

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ:...

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ!

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್...

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...