ಮಕ್ಕಳಿಗೆ ಬ್ಯಾಟ್ ಕೊಡಿಸಲು ಸಹಾಯ ಮಾಡಿದ ಯು.ಟಿ ಖಾದರ್

Date:

ಕಾಂಗ್ರೆಸ್ ನಾಯಕ, ಮಾಜಿ ಸಚಿವ ಯು. ಟಿ. ಖಾದರ್ ದಿನಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ. ತಮ್ಮ ಬಳಿ ಓಡೋಡಿ ಬಂದ ಮಕ್ಕಳಿಗೆ 500 ರೂಪಾಯಿ ಕೊಟ್ಟು ಬ್ಯಾಟ್, ಬಾಲ್ ಕೊಳ್ಳಲು ಹೇಳಿದ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ನಡೆದಿದೆ.
ಬುಧವಾರ ಉಳ್ಳಾಲದ ಮನೆಯಿಂದ ಹೊರಟ ಯು. ಟಿ. ಖಾದರ್‌ ದಾರಿಯಲ್ಲಿ ಆಟ ಆಡುತ್ತಿದ್ದ ಮಕ್ಕಳನ್ನು ಕಂಡರು. ಮಕ್ಕಳನ್ನು ಕಂಡ ಕೂಡಲೇ ಕಾರ್‌ ಅನ್ನು ನಿಧಾನ ಮಾಡಿದರು. ಮಕ್ಕಳು ಕಾರಿನತ್ತ ಓಡೋಡಿ ಬಂದಿರು. ಮಕ್ಕಳ ಜೊತೆ ಮಾತುಕತೆ ನಡೆಸಿದ ಖಾದರ್ ಕುಶಲೋಪಚಾರಿ ವಿಚಾರಿಸಿದರು.

ಮಕ್ಕಳು ಆಟವಾಡಲು ಬ್ಯಾಟ್ ಕೊರತೆಯಿ ಇದ್ದನ್ನು ಕಂಡು ಕೂಡಲೇ 500 ರೂಪಾಯಿ ಕೊಟ್ಟು ಹೊಸ ಬ್ಯಾಟ್, ಬಾಲ್ ತೆಗೆದುಕೊಳ್ಳುವಂತೆ ಸೂಚಿಸಿದರು. 500 ರೂಪಾಯಿ ನೋಟು ಕಂಡು ಮಕ್ಕಳ ಮುಖದಲ್ಲೂ ನಗು ಅರಳಿತು.
ಮಾಜಿ ಸಚಿವ ಯು. ಟಿ. ಖಾದರ್ ಕೊಟ್ಟ 500 ರೂಪಾಯಿಯನ್ನು ಖುಷಿಯಿಂದ ತೆಗೆದುಕೊಂಡ ಮಕ್ಕಳು ಥ್ಯಾಂಕ್ಸ್ ಹೇಳಿದರು. ಹೊಸ ಬ್ಯಾಟ್ ಬರುವ ಖುಷಿಯಲ್ಲಿ ಮತ್ತೆ ಆಟವಾಡಲು ಓಡಿದರು.
ಯು. ಟಿ. ಖಾದರ್ ಬಳಿ ಮುಡಿಪು ಪದವಿ ಕಾಲೇಜಿನ ನೂತನ ಕಟ್ಟಡದ ಕಾಮಗಾರಿಯ ಪರಿಶೀಲನೆ ಹಾಗೂ ಉದ್ಘಾಟನಾ ಸಮಾರಂಭದ ಬಗ್ಗೆ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಳ್ಳಲು ತೆರಳಿದರು.


ಸದಾ ಜನರ ಜೊತೆ ಬೆರೆಯುವ ಕರ್ನಾಟಕದ ಸರಳ ರಾಜಕಾರಣಿಗಳಲ್ಲಿ ಯು. ಟಿ. ಖಾದರ್ ಸಹ ಒಬ್ಬರು. ರಸ್ತೆಯಲ್ಲಿ ಹೋಗುವಾಗ ಟ್ರಾಫ್ರಿಕ್ ಜಾಮ್ ಉಂಟಾಗಿದ್ದರೆ ಕಾರಿನಿಂದ ಇಳಿದು ಸಂಚಾರ ವ್ಯವಸ್ಥೆಯನ್ನು ಖಾದರ್ ಹಲವು ಬಾರಿ ಸುಗಮಗೊಳಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿಬೆಂಗಳೂರು: ನಗರದ...

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ ಸಿಸಿಬಿಗೆ ದೂರು

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ...

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ ಕಷ್ಟ ತಪ್ಪಿದ್ದಲ್ಲ!

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ...

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...