ಮನೆ ಮೇಲೆ ನಿಂತು ಮಗ ಗಾಳಿಪಟ ಹಾರಿಸುತ್ತಿದ್ದ ವೇಳೆ ಗಾಳಿಪಟವು ವಿದ್ಯುತ್ ವೈರ್ ಬಳಿ ಸಿಕ್ಕಿ ಹಾಕಿಕೊಂಡಿದೆ. ಇನ್ನು ಗಾಳಿಪಟ ಸಿಕ್ಕಿ ಹಾಕಿಕೊಂಡಿದ್ದನ್ನು ಆತ ತನ್ನ ತಂದೆ ಅಬ್ಸಲ್ ಅವರ ಬಳಿ ಹೇಳಿದ್ದಾನೆ. ಮಗ ಹಾರಿಸುತ್ತಿದ್ದ ಗಾಳಿಪಟ ಸಿಕ್ಕಿ ಹಾಕಿ ಕೊಂಡಿದ್ದನ್ನು ಬಿಡಿಸಲು ಅಬ್ಸಲ್ ಅವರು ಹೋಗಿದ್ದಾರೆ.
ಈಕೆ ಗಾಳಿಪಟ ಬಿಡಿಸುವ ವೇಳೆ ಪಕ್ಕದಲ್ಲಿಯೇ ಇದ್ದ ಹೈ ಟೆನ್ಷನ್ ವೈರ್ ಅವರಿಗೆ ತಗುಲಿ ಸ್ಥಳದಲ್ಲಿಯೇ ಸುಟ್ಟು ಕರಕಲಾಗಿದ್ದಾರೆ. ಇನ್ನು ಈ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿದ್ದು ದೃಶ್ಯದ ಭೀಕರತೆಯನ್ನು ಕಂಡು ಜನ ಬೆಚ್ಚಿಬಿದ್ದಿದ್ದಾರೆ ಇನ್ನು ಈ ಘಟನೆ ನಡೆದಿರುವುದು ತುಮಕೂರಿನ ಸದಾಶಿವನಗರದಲ್ಲಿ.