ಮಗ ಶಾಸಕನಾದರೂ ತಂದೆ ಬದಲಾಗಲಿಲ್ಲ !?

0
228

ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜರ ತಂದೆ ಮುತ್ತಣ್ಣ ಪೂಂಜ (74) ತಮ್ಮ ಗರ್ಡಾಡಿ ಮನೆಯಲ್ಲಿ 30 ವರ್ಷಗಳಿಂದ ಕೃಷಿಯಲ್ಲಿ ತೊಡಗಿದ್ದಾರೆ. 1981ರಲ್ಲಿ ನಳಿನಿ ಎಂ.ಪೂಂಜ ಅವರನ್ನು ವಿವಾಹವಾಗಿ 1982ರಲ್ಲಿ ಸುಮಾರು 3 ಎಕರೆ ಜಾಗದಲ್ಲಿ 2 ಸಾವಿರ ಅಡಿಕೆ ಮತ್ತು ತೆಂಗಿನ ಕೃಷಿಯಲ್ಲಿ ತೊಡಗಿದ ಮುತ್ತಣ್ಣ ಅವರ ಕೃಷಿ ಪ್ರೀತಿ ಇಂದಿಗೂ ಮಾಸಿಲ್ಲ.

ಕಳೆದ ಬಾರಿ ಮಗ ಬೆಳ್ತಂಗಡಿ ಶಾಸಕರಾಗಿ ಆಯ್ಕೆ ಆಗುವ ಸಂದರ್ಭದಲ್ಲೂ ಮುತ್ತಣ್ಣ ಅವರ ಸರಳ ಬದುಕಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಯಾಗಿತ್ತು. ಈಗ ಮಗ ಶಾಸಕನಾಗಿ ವರ್ಷ ಕಳೆದರೂ ಕೃಷಿ ಮತ್ತು ಹೈನುಗಾರಿಕೆಯನ್ನು ಮರೆಯದ ಅವರ ಜೀವನ ಪ್ರೀತಿ ಎಲ್ಲರಿಗೂ ಪ್ರೇರಣೆ ಯಾಗುವಂತಿದೆ.

ಎರಡು ಹಸು ಸಾಕು ತ್ತಿರುವ ಮುತ್ತಣ್ಣ ಬೆಳಗ್ಗೆ 8 ಲೀ., ಸಂಜೆ 4 ಲೀ. ಹಾಲನ್ನು ಸ್ಥಳೀಯ ಹಾಲಿನ ಡೇರಿಗೆ ಹಾಕುತ್ತಾರೆ. ವಯಸ್ಸಾಗಿದ್ದರಿಂದ ಕೆಲಸದವರ ಮೂಲಕ ಹಾಲು ಕಳುಹಿಸುತ್ತೇನೆ. ಅವರು ತಡವಾದರೆ ನಾನೇ ಸೈಕಲ್‌ನಲ್ಲಿ ಹಾಲು ಹಾಕಿ ಬರುತ್ತೇನೆ ಎನ್ನುತ್ತಾರೆ ಮುತ್ತಣ್ಣ. ಮಗ ನಮ್ಮನ್ನು ಕೆಲಸ ಮಾಡದಂತೆ ಹೇಳುತ್ತಾನೆ. ಅದರೆ ಪತಿಯ ಖುಷಿಯಂತೆ ಕೃಷಿಯಲ್ಲಿ ತೊಡಗಿದ್ದೇವೆ ಎನ್ನುತ್ತಾರೆ ನಳಿನಿ.

LEAVE A REPLY

Please enter your comment!
Please enter your name here