ಮತ್ತೆ ಇಬ್ಬರು ಮಹಿಳೆಯರಿಂದ ಅಯ್ಯಪ್ಪನ ದೇವಸ್ಥಾನ ಪ್ರವೇಶ ಯತ್ನ..!!
ಕಳೆದ ಕೆಲ ದಿನಗಳ ಹಿಂದೆ ಇಬ್ಬರು ಮಹಿಳೆಯರು ಶ್ರೀ ಶಬರಿಮಲೆ ಅಯ್ಯಪ್ಪನ ದೇವಸ್ಥಾನವನ್ನ ಪ್ರವೇಶ ಮಾಡಿದ್ರು.. ಇದಕ್ಕೆ ತೀರ್ವ ವಿರೋಧ ವ್ಯಕ್ತವಾಗಿತ್ತು.. ಹೀಗಿರುವಾಗಲೇ ಮತ್ತೆ ಇಬ್ಬರು ಮಹಿಳೆಯರು ಇಂದು ಮುಂಜಾನೆ ದೇವಸ್ಥಾನ ಪ್ರವೇಶಕ್ಕೆ ಯತ್ನಿಸಿದ ಘಟನೆ ವರದಿಯಾಗಿದೆ..
ಕಣ್ಣೂರಿನ ರೇಶ್ಮಾ ಹಾಗು ಕೊಲ್ಲಮ್ ನ ಶನಿಲಾ ಅವರು ಅಯ್ಯಪ್ಪನ ದೇವಸ್ಥಾನಕ್ಕೆ ಪ್ರವೇಶ ಪಡೆಯಲು ಯತ್ನಸಿದವರು.. ಆದರೆ ಈ ಇಬ್ಬರನ್ನು ನೀಲಿಮಾಲ ಬೆಟ್ಟದಲ್ಲಿ ತಡೆ ಹಿಡಿದು ಪ್ರತಿಭಟನೆ ನಡೆಸಲಾಗಿದೆ. ಪೊಲೀಸರ ರಕ್ಷಣೆಯೊಂದಿಗೆ ಅಯ್ಯಪ್ಪನ ಸನ್ನಿಧಿಗೆ ಹೋಗಲು 4.30 ಸುಮಾರಿಗೆ ಬೆಟ್ಟ ಹತ್ತಲು ಶುರು ಮಾಡಿದ್ದರು..
ಈ ವಿಚಾರ ತಿಳಿಯುತ್ತಿದ್ದ ಹಾಗೆ ಪ್ರತಿಭಟನೆ ಹೆಚ್ಚಾಗಿದ್ದು, ಈ ಇಬ್ಬರು ದರ್ಶನ ಪಡೆಯದೆ ವಾಪಸ್ಸಾಗಿದ್ದಾರೆ.. ಸದ್ಯ 7 ಮಂದಿ ಮಹಿಳೆಯರು ದರ್ಶನಕ್ಕೆ ಆಗಮಿಸುತ್ತಿರುವ ವಿಚಾರ ತಿಳಿದು ಶಬರಿಮಲೆ ಕರ್ಮ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಲು ಆರಂಭಿಸಿದ್ರು.. ಇದರಿಂದ ಸದ್ಯ ಮಹಿಳೆಯ ಪ್ರವೇಶಕ್ಕೆ ತಾತ್ಕಾಲಿಕ ತಡೆ ಬಿದ್ದಂತಾಗಿದೆ.