ಮುಂದಿನ 5 ದಿನ ರಾಜ್ಯದ ಈ ಊರುಗಳಲ್ಲಿ ಮಹಾಮಳೆ!

0
61

ರಾಜ್ಯದಲ್ಲಿ ಇಂದಿನಿಂದ ಮುಂಗಾರು ಚುರುಕಾಗಲಿದ್ದು, ರಾಜ್ಯದ ಬಹುತೇಕ ಕಡೆಗಳಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬೆಳಗಾವಿ, ಧಾರವಾಡ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೊಡಗು, ಬೀದರ್, ಮಂಡ್ಯ, ರಾಮನಗರ, ಮೈಸೂರು, ಶಿವಮೊಗ್ಗ, ತುಮಕೂರಿನಲ್ಲಿ ಜುಲೈ 10ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಮುಂದಿ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ, ಉತ್ತರ ಒಳನಾಡಿನ ಕೆಲವೆಡೆ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಹೆಚ್ಚಿನ ಮಳೆಯಾಗಲಿದೆ.

ಎಲ್ಲೆಲ್ಲಿ ಹೆಚ್ಚು ಮಳೆ ಸುರಿದಿದೆ?

ಕೊಳ್ಳೇಗಾಲ, ಪಾವಗಡ, ಆನೇಕಲ್, ಥೊಂಡೆಭಾವಿ, ಬೆಂಗಳೂರು ನಗರ, ಕೃಷ್ಣರಾಜಪೇಟೆ, ನೆಲಮಂಗಲ, ಶ್ರೀರಂಗಪಟ್ಟಣ, ಕುಣಿಗಲ್, ಮಾಗಡಿ, ಬರಗೂರು, ಗುಬ್ಬಿ, ಗೌರಿಬಿದನೂರು, ಮಂಡ್ಯ, ಮೊಳಕಾಲ್ಮೂರು, ಹಿರಿಯೂರು, ಮೈಸೂರು, ಚಿಂತಾಮಣಿ, ಕೆಆರ್ ನಗರ, ನಂಜನಗೂಡು, ಸಿರಾ, ಬೆಳ್ಳೂರು, ಮಲವಳ್ಳಿ, ಹಡಗಲಿ, ಚಿತ್ರದುರ್ಗ, ಭಟ್ಕಳ, ಕೋಟ, ಹೊನ್ನಾವರ, ರಾಯಚೂರಿನಲ್ಲಿ ಮಳೆಯಾಗಿದೆ.

ಯಾವ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ?

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬೆಳಗಾವಿ, ಧಾರವಾಡ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೊಡಗು, ಬೀದರ್, ಮಂಡ್ಯ, ರಾಮನಗರ, ಮೈಸೂರು, ಶಿವಮೊಗ್ಗ, ತುಮಕೂರಿನಲ್ಲಿ ಜುಲೈ 10ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

LEAVE A REPLY

Please enter your comment!
Please enter your name here