ಮತ್ತೆ ತಂಡಕ್ಕೆ ಆಡ್ತೀನಿ ಅನ್ನೋ ವಿಶ್ವಾಸವೇ ಇರ್ಲಿಲ್ಲ : ರೈನಾ

Date:

ಭಾರತ ತಂಡದ ಮಾಜಿ ಎಡಗೈ ಬ್ಯಾಟ್ಸ್‌ಮನ್‌ ಸುರೇಶ್‌ ರೈನಾ, ತಮಗಾದ ಮಂಡಿ ನೋವಿನ ಗಾಯದ ಸಮಸ್ಯೆ ಕಾರಣ 2007ರ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪರ ಆಡುವ ಅವಕಾಶ ಕೈತಪ್ಪಿದರ ಬಗ್ಗೆ ಇದೀಗ ಮಾತನಾಡಿದ್ದಾರೆ.
ಅಂದು ಆ ಗಾಯದ ಸಮಸ್ಯೆ ಗಂಭೀರವಾಗಿದ್ದ ಕಾರಣ ಭಾರತ ತಂಡದ ಪರ ಮರಳಿ ಆಡುತ್ತೇನೆಂಬ ವಿಶ್ವಾಸವನ್ನೇ ಕಳೆದುಕೊಂಡಿದ್ದ ಸಂದರ್ಭದಲ್ಲಿ ಆಪ್ತ ಸ್ನೇಹಿತ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಎಂಎಸ್‌ ಧೋನಿ ತಮಗೆ ನೀಡಿದ ಬೆಂಬಲವನ್ನು ರೈನಾ ಸ್ಮರಿಸಿದ್ದಾರೆ.

“2007ರಲ್ಲಿ ನನಗೆ ಗಾಯದ ಸಮಸ್ಯೆ ಎದುರಾದಾಗ ಇಷ್ಟು ಚಿಕ್ಕವಯಸ್ಸಿನಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಡುತ್ತಿದ್ದೀಯ ಎಂದು ಹೇಳಿದ್ದ ಧೋನಿ, ನನಗೆ ಅಗತ್ಯದ ಸಮಯ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದರು. ಆಗಿನ್ನೂ ಧೋನಿ ಭಾರತ ತಂಡದ ನಾಯಕ ಆಗಿರಲಿಲ್ಲ. ಆದರೂ ನನ್ನ ಬಗ್ಗೆ ಅಷ್ಟು ಕಾಳಜಿ ವಹಿಸುತ್ತಿದ್ದರು. ಆಗ ಬರೋಬ್ಬರಿ ಒಂದೂವರೆ ವರ್ಷ ನನ್ನಿಂದ ಕ್ರಿಕೆಟ್‌ ಆಡಲು ಸಾಧ್ಯವಾಗಿರಲಿಲ್ಲ. ಆ ಸಮಯದಲ್ಲಿ ಪ್ರತಿ ಎರಡು ದಿನಕ್ಕೊಮ್ಮೆ ನನ್ನ ಸ್ಥಿತಿಗತಿ ಬಗ್ಗೆ ಅವರು ವಿಚಾರಿಸುತ್ತಿದ್ದರು. ವೈದ್ಯರು ಏನಂತ್ತಾರೆ, ಪರಿಹಾರ ಏನು ಎಂದೆಲ್ಲಾ ಕೇಳಿದ್ದರು,” ಎಂದು ರೈನಾ ತಮ್ಮ ನೆನಪಿನಾಳ ಕೆದಕಿದ್ದಾರೆ.
2007ರಲ್ಲಿ ಸಂಭವಿಸಿದ ಗಾಯದ ಸಮಸ್ಯೆ ಕಾರಣ ರೈನಾ ವೃತ್ತಿಬದುಕು ಅಂತ್ಯಗೊಳ್ಳುವ ಸಂಕಷ್ಟ ಎದುರಾಗಿತ್ತು. ಇದೇ ಕಾರಣಕ್ಕೆ ದಕ್ಷಿಣ ಆಫ್ರಿಕಾ ಆತಿಥ್ಯದಲ್ಲಿ ನಡೆದ ಚೊಚ್ಚಲ ಆವೃತ್ತಿಯ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್ ಟೂರ್ನಿಯಲ್ಲಿ ರೈನಾ ಭಾರತ ತಂಡದ ಪರ ಆಡಲು ಸಾಧ್ಯವಾಗಲಿಲ್ಲ.


“ಒಬ್ಬ ಆಟಗಾರನಾಗಿ, ಸಹೋದ್ಯೋಗಿಯಾಗಿ, ಸ್ನೇಹಿತನಾಗಿ ಅವರು ನನ್ನ ಬಗ್ಗೆ ಬಹಳಾ ಕಾಳಜಿ ವಹಿಸಿದ್ದಾರೆ. ಇದರಿಂದ ನನಗೆ ಭಾರತ ತಂಡದ ಪರ ಮರಳಿ ಆಡುತ್ತೇನೆ ಎಂಬ ವಿಶ್ವಾಸ ಚಿಗುರಿತು. ಬಳಿಕ ನನ್ನ ಆಟ ಮತ್ತು ಮಂಡಿ ನೋವಿನ ಗಾಯದ ಸಮಸ್ಯೆಯಿಂದ ಹೊರ ಬರಲು ಕಠಿಣ ಪರಿಶ್ರಮ ವಹಿಸುವ ದಿಟ್ಟ ನಿರ್ಧಾರ ಮಾಡಿದೆ. ಧೋನಿಯಿಂದ ಆತ್ಮವಿಶ್ವಾಸ ಸಿಗದೇ ಇದ್ದಿದ್ದರೆ ಬಹುಶಃ ನನ್ನಿಂದ ಭಾರತ ತಂಡದ ಪರ ಮರಳಿ ಆಡಲು ಸಾಧ್ಯವಾಗುತ್ತಲೇ ಇರಲಿಲ್ಲ,” ಎಂದು ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಧೋನಿ ಸಾರಥ್ಯದ ಸಿಎಸ್‌ಕೆ ತಂಡದ ಪರ ಆಡುತ್ತಿರುವ ರೈನಾ ಹೇಳಿಕೊಂಡಿದ್ದಾರೆ.
ಧೋನಿ ಮತ್ತು ರೈನಾ ನಡುವಣ ಸ್ನೇಹ ಅದ್ಭುತವಾಗಿದೆ. 2008ರಿಂದ ಈವರೆಗೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪರ ಜೊತೆಯಾಗಿ ಆಡುತ್ತಾ ಬಂದಿರುವ ಈ ಇಬ್ಬರೂ ಆಟಗಾರರು ಒಂದೇ ದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿಬದುಕಿಗೆ ನಿವೃತ್ತಿ ಘೋಷಿಸಿದರು. 2020ರ ಆಗಸ್ಟ್‌ 15ರಂದು ಧೋನಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಬದುಕಿಗೆ ತೆರೆ ಎಳೆದ ಬೆನ್ನಲ್ಲೇ ಇನ್ನೂ ಕನಿಷ್ಠ 4 ವರ್ಷವಾದರೂ ಆಡುವ ಸಾಮರ್ಥ್ಯ ಹೊಂದಿದ್ದ ರೈನಾ ಕೂಡ ಧೋನಿ ಮಾದರಿಯಲ್ಲೇ ನಿವೃತ್ತಿ ಘೋಷಿಸಿ ಕ್ರಿಕೆಟ್‌ ಜಗತ್ತಿಗೆ ಶಾಕ್ ಕೊಟ್ಟಿದ್ದರು. ಇತ್ತೀಚೆಗೆ ಧೋನಿ ಐಪಿಎಲ್‌ ಆಡದೇ ಇದ್ದರೆ ತಾವೂ ಕೂಡ ಆಡುವುದಿಲ್ಲ ಎಂಬ ಹೇಳಿಕೆಯನ್ನೂ ರೈನಾ ನೀಡಿದ್ದಾರೆ.
ಭಾರತ ತಂಡದ ಪರ 18 ಟೆಸ್ಟ್‌ ಕ್ರಿಕೆಟ್, 226 ಏಕದಿನ ಕ್ರಿಕೆಟ್‌ ಮತ್ತು 78 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿರುವ ಸುರೇಶ್‌ ರೈನಾ, ಕ್ರಮವಾಗಿ 768, 5615 ಮತ್ತು 1605 ರನ್‌ಗಳನ್ನು ಬಾರಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಮೊದಲ ಶತಕ ಬಾರಿಸಿದ ದಾಖಲೆ ರೈನಾ ಹೆಸರಲ್ಲಿದೆ.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...