No menu items!
11.1 C
Munich
Wednesday, April 29, 2026

ಲಂಕಾದ ವಿರುದ್ಧ ಪಡಿಕ್ಕಲ್ ಗೆ ಸಿಗುತ್ತಾ ಅವಕಾಶ?

Must read

ಶ್ರೀಲಂಕಾ ವಿರುದ್ಧ ಸೀಮಿತ ಓವರ್‌ಗಳ ಸರಣಿಗೆ ಕರ್ನಾಟಕದ ಯುವ ಆಟಗಾರ ದೇವದತ್ ಪಡಿಕ್ಕಲ್ ಕೂಡ ಆಯ್ಕೆಯಾಗಿದ್ದಾರೆ. ದೇಶೀಯ ಕ್ರಿಕೆಟ್‌ ಹಾಗೂ ಐಪಿಎಲ್‌ನಲ್ಲಿ ಅದ್ಭುತವಾದ ಪ್ರದರ್ಶನ ನೀಡಿ ಮಿಂಚಿರುವ ಪಡಿಕ್ಕಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವುದನ್ನು ನೋಡಲು ಅವರ ಅಭಿಮಾನಿಗಳು ಕಾತರಿಸುತ್ತಿದ್ದಾರೆ.

ಹಾಗಾದರೆ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆಡುವ ಅವಕಾಶ ಪಡೆದುಕೊಳ್ಳುತ್ತಾರಾ ದೇವದತ್ ಪಡಿಕ್ಕಲ್ ಎಂಬುದು ಪ್ರಶ್ನೆಯಾಗಿದೆ.
ಆದರೆ ಕನ್ನಡಿಗ ದೇವದತ್ ಪಡಿಕ್ಕಲ್ ಮೊದಲ ಪಂದ್ಯದಲ್ಲಿಯೇ ಟೀಮ್ ಇಂಡಿಯಾ ಪರವಾಗಿ ಕಣಕ್ಕಿಳಿಯುವ ಆವಕಾಶ ಗಿಟ್ಟಿಸಿಕೊಳ್ಳುವ ಸಾಧ್ಯತೆ ಬಹುತೇಕ ಕಡಿಮೆಯಿದೆ. ಆರಂಭಿಕನಾಗಿರುವ ಪಡಿಕ್ಕಲ್‌ಗೆ ಇನ್ನೋರ್ವ ಯುವ ಆಟಗಾರ ಪೃಥ್ವಿ ಶಾ ಭಾರೀ ಪೈಪೋಟಿಯನ್ನು ನೀಡುತ್ತಿದ್ದಾರೆ. ಇದು ಮೊದಲ ಪಂದ್ಯದಲ್ಲಿ ಪಡಿಕ್ಕಲ್ ಅವಕಾಶ ಗಿಟ್ಟಿಸಿಕೊಳ್ಳಲು ಅಡ್ಡಿಯಾಗುವ ಸಾಧ್ಯತೆ ಹೆಚ್ಚಿದೆ.


ಒಂದೆಡೆ ನಾಯಕ ಶಿಖರ್ ಧವನ್ ಆರಂಭಿಕನಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತ. ಮತ್ತೊಂದು ಆರಂಭಿಕ ಸ್ಥಾನಕ್ಕೆ ಪೃಥ್ವಿ ಶಾ ಹಾಗೂ ದೇವದತ್ ಪಡಿಕ್ಕಲ್ ಮಧ್ಯೆ ಪೈಪೋಟಿ ನಡೆಯಲಿದೆ. ಪಡಿಕ್ಕಲ್‌ ರೀತಿಯಲ್ಲಿಯೇ ಶಾ ದೇಶೀಯ ಕ್ರಿಕೆಟ್ ಹಾಗೂ ಐಪಿಎಲ್‌ನಲ್ಲಿ ಅತ್ಯುನ್ನತ ಫಾರ್ಮ್ ಪ್ರದರ್ಶಿಸಿದ್ದಾರೆ.
ಜೊತೆಗೆ ಐಪಿಎಲ್‌ನಲ್ಲಿ ಶಿಖರ್ ಧವನ್ ಜೊತೆಗೆ ಆರಂಭಿಕನಾಗಿಯೂ ಕಣಕ್ಕಿಳಿದ ಅನುಭವ ಪೃಥ್ವಿ ಶಾ ಹೊಂದಿದ್ದಾರೆ. ಅಲ್ಲದೆ ಶ್ರೀಲಂಕಾದಲ್ಲಿ ನಡೆದ ಇಂಟ್ರಾ ಸ್ಕ್ವಾಡ್ ಪಂದ್ಯದಲ್ಲಿಯೂ ಪೃಥ್ವಿ ಶಾ ಸ್ಥಿರ ಪ್ರದರ್ಶನ ನೀಡಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ನಾಯಕ ಶಿಖರ್ ಧವನ್‌ಗೆ ಆರಂಭಿಕನಾಗಿ ಪೃಥ್ವಿ ಶಾ ಸಾಥ್ ನೀಡುವ ಸಾಧ್ಯತೆ ಹೆಚ್ಚಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article