ಮತ್ತೆ ಬೆಟ್ಟದ ಹೂವು ಸಿನಿಮಾ ನೆನೆದ ಪವರ್ ಸ್ಟಾರ್..
ನಟಸಾರ್ವಭೌಮ ಚಿತ್ರದ ಶೂಟಿಂಗ್ ವೇಳೆ ತಾವು 1985ರಲ್ಲಿ ಅಭಿನಯಿಸಿದ್ದ ಬೆಟ್ಟದ ಹೂವು ಚಿತ್ರೀಕರಣವಾದ ಸ್ಥಳವನ್ನ ನೋಡಿ ತಮ್ಮ ಹಿಂದಿನ ನೆನಪುಗಳನ್ನ ಹಂಚಿಕೊಂಡಿದ್ರು.. ಈ ವಿಡಿಯೋ ಬಾರಿ ವೈರಲ್ ಸಹ ಆಗಿತ್ತು.. ಬೆಟ್ಟದ ಹೂವು ಚಿತ್ರದಲ್ಲಿ ಅಭಿನಯಿಸಿದ್ದ ಅಪ್ಪುಗೆ ಆಗ ಕೇವಲ 10 ವರ್ಷ..
ಸದ್ಯ ಮತ್ತೆ ತಮಗೆ ನ್ಯಾಷನಲ್ ಅವಾರ್ಡ್ ತಂದುಕೊಟ್ಟ ಇದೇ ಎವರ್ ಗ್ರೀನ್ ಸಿನಿಮಾವನ್ನ ನೆನಪಿಸಿಕೊಂಡಿದ್ದಾರೆ ಪವರ್ ಸ್ಟಾರ್.. ಹೌದು, ಸಿನಿಮಾ ತೆರೆಕಾಣುವ ಸಂದರ್ಭದಲ್ಲಿ ಮಾಡಿಸಲಾಗಿದ್ದ ಪೋಸ್ಟರ್ ಒಂದನ್ನ ತಮ್ಮ ಶೇರ್ ಚಾಟ್ ಖಾತೆಯಲ್ಲಿ ಅಪ್ ಲೋಡ್ ಮಾಡಿದ್ದಾರೆ.. ಸದ್ಯ ಫೇಸ್ ಬುಕ್ ಗಿಂತ ಶೇರ್ ಚಾಟ್ ನಲ್ಲಿ ಹೆಚ್ಚು ಸಕ್ರೀಯರಾಗಿರುವ ಪವರ್ ಸ್ಟಾರ್, ತಮ್ಮ ಸಿನಿಮಾ ಅಪ್ ಡೇಟ್ ಗಳನ್ನ ಶೇರ್ ಚಾಟ್ ನಲ್ಲಿ ನೀಡುತ್ತಿದ್ದಾರೆ.. ಹೀಗಾಗೆ ಬೆಟ್ಟದ ಹೂವು ಚಿತ್ರದ ಅಪರೂಪದ ಪೋಸ್ಟರ್ ಅನ್ನ ಶೇರ್ ಮಾಡಿ, ಮರೆಯಲಾಗದ ನೆನಪುಗಳು ಎಂದಿದ್ದಾರೆ..