ಸ್ಯಾಂಡಲ್ವುಡ್ ಅಂಗಳದಲ್ಲಿ ಮಾತ್ರವಲ್ಲದೇ ಇಂಡಿಯಾದ್ಯಂತ ಮೀಟೂ ಅಭಿಯಾನದಿಂದ ಸಖತ್ ಸೌಂಡ್ ಮಾಡಿದ್ದ ನಟಿಮಣಿ ಅಂದ್ರೆ ಶೃತಿ ಹರಿಹರನ್. ಮೀಟೂವಿನ ಘಾಟುವಿನಿಂದಾಗಿ ಶೃತಿ ಹರಿಹರನ್ ಸ್ಯಾಂಡಲ್ವುಡ್ನಲ್ಲಿ ಅವಕಾಶವೇ ಇಲ್ಲದಂತಾಗಿದೆ. ನಟಿ ಶೃತಿ ಹರಿಹರನ್ ಸದ್ಯ ಅಮೇರಿಕಾದಲ್ಲಿ ನೆಲೆಸಿದ್ದಾರೆ. ಮಿಟೂ ವಿಚಾರವಾಗಿ ಬಹಳಷ್ಟು ಸುದ್ದಿಯಾಗಿದ್ದ ಶೃತಿ ನಂತರ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು ಕಡಿಮೆಯೇ. ಸದ್ಯ ಈ ನಟಿ ನಿರ್ದೇಶನದತ್ತ ಗಮನ ಹರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ನಿರ್ದೇಶನದ ತರಭೇತಿ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಇದರ ಜೊತೆಗೆ ಈ ನಟಿ ತಾಯಾಗುತ್ತಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಕೇಳಿ ಬರುತ್ತಿವೆ.
ಹೌದು ಮಿಟೂ ಆರೋಪ ಸಂಬಂಧ ದೂರು ನೀಡಿದ್ದ ವೇಳೆ ಇವರಿಗೆ ಮದುವೆಯಾಗಿದೆ ಎಂದು ಗೊತ್ತಾಗಿತ್ತು. ಸದ್ಯ ಈ ನಟಿ ರಾಮ್ ಕುಮಾರ್ ಅವರನ್ನು ಮದುವೆಯಾಗಿದ್ದರಂತೆ, ಅದನ್ನು ದೂರು ನೀಡುವಾಗ ಒಪ್ಪಿಕೊಂಡಿದ್ದರು. ಇದೀಗ ಈ ದಂಪತಿ ಅಮೇರಿಕಾದಲ್ಲೇ ನೆಲೆಸಿದ್ದು ಅವರ ಪತಿ ಕೂಡ ಅಲ್ಲಿಯೇ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಈ ನಟಿ ತಾಯಿಯಾಗುವ ಕನಸು ಈಡೇರಿದೆಯಂತೆ. ಈ ನಟಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.