ಕನ್ನಡದ ಸ್ಟಾರ್ ನಟಿಯರಲ್ಲಿ ಒಬ್ಬರು ಮೇಘನಾರಾಜ್. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲೆಯಾಳಂ ಭಾಷೆಯ ಸಿನಿಮಾಗಳಲ್ಲೂ ನಟಿಸಿದ್ದಾರೆ. 2010ರಲ್ಲಿ ಬಿಡುಗಡೆಯಾದ ಪುಂಡ ಸಿನಿಮಾದ ಮೂಲಕ ಮೇಘನಾ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಅದಕ್ಕೂ ಮೊದಲು ತೆಲುಗಿನಲ್ಲಿ ಎರಡು ಸಿನಿಮಾಗಳನ್ನು ಮಾಡಿದ್ದರು. 2013ರಲ್ಲಿ ರಾಜಾಹುಲಿ, ಬಹುಪರಾಕ್ ಸಿನಿಮಾಗಳಲ್ಲಿ ನಟಿಸಿದರು. ನಂತರ ಆಟಗಾರ, ವಂಶೋದ್ಧಾರಕ, ನೂರೊಂದು ನೆನಪು, ಜಿಂದಾ, ಎಂಎಂಸಿಹೆಚ್ , ಇರುವುದೆಲ್ಲವಾ ಬಿಟ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.
ನಟ ಚಿರಂಜೀವಿ ಸರ್ಜಾ ಅವರನ್ನು ಮೇಘನಾ ವಿವಾಹವಾಗಿರುವುದು ಗೊತ್ತೇ ಇದೆ. ಮದ್ವೆ ಬಳಿಕ ಮೇಘನಾರಾಜ್ ಅವರ ನಟನೆಯ ಒಂದೇ ಒಂದು ಸಿನಿಮಾ ಕೂಡ ರಿಲೀಸ್ ಆಗಿರಲಿಲ್ಲ. ಈಗ ಒಂಟಿಯಾಗಿ ಮೇಘನಾ ಬರ್ತಿದ್ದಾರೆ. ಒಂಟಿಯಾಗಿ ಎನ್ನುವುದು ಮೇಘನಾ ಅವರ ಸಿನಿಮಾ.
ಒರಟ ಶ್ರೀ ನಿರ್ದೇಶನಕ ಸಿನಿಮಾ ಒಂಟಿ. ಈ ಸಿನಿಮಾದಲ್ಲಿ ಮೇಘನಾ ನಾಯಕಿ. ಆರ್ಯ ನಾಯಕ. ಆರ್ಯ ಸಿನಿಮಾದ ಹಿರೋ ಆಗುವುದರಲ್ಲದೆ ಬಂಡವಾಳವನ್ನೂ ಹಾಕಿದ್ದಾರೆ. ಸಿನಿಮಾದ ಆಡಿಯೋ, ಟ್ರೇಲರ್ ರಿಲೀಸ್ ಆಗಿದೆ. ಚಿತ್ರತಂಡ ಸೆನ್ಸಾರ್ಗೆ ಕಾಯುತ್ತಿದ್ದು, ಮುಂದಿನ ತಿಂಗಳು ರಿಲೀಸ್ ಆಗಲಿದೆ.
ಮದ್ವೆಯಾದ್ರೂ ಮೇಘನಾರಾಜ್ ‘ಒಂಟಿ’..!
Date: