ಮಧುಮೇಹದಿಂದ ರಕ್ತದೊತ್ತಡ ನಿವಾರಣೆವರೆಗೆ ಕರಿಬೇವಿನ ಎಲೆಗಳನ್ನು ಸೇವಿಸಿ..!
ಕರಿಬೇವಿನ ಎಲೆಗಳು , ಅಡುಗೆಯಲ್ಲಿ ಪರಿಮಳಕ್ಕೆ) ಹೆಸರುವಾಸಿಯಾಗಗಿದೆ, ಹಾಗೆಯೇ ಇದು ಕೂದಲಿನ ಆರೋಗ್ಯವನ್ನು ಉತ್ತೇಜಿಸಲು ಸಹ ಪ್ರಯೋಜನಕಾರಿಯಾಗಿದೆ. ಈ ಎಲೆಗಳು ನೆತ್ತಿಯನ್ನು ಪೋಷಿಸುವ ಮತ್ತು ಕೂದಲನ್ನು ಬಲಪಡಿಸುವ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ.
ಅದಲ್ಲದೆ ಮೂಳೆ, ಹಲ್ಲುಗಳು ಮತ್ತು ಸ್ನಾಯುಗಳ ಬೆಳವಣಿಗೆಗೆ ಈ ಎಲ್ಲಾ ವಸ್ತುಗಳು ಬಹಳ ಮುಖ್ಯ.ಕರಿಬೇವಿನ ವೈಜ್ಞಾನಿಕ ಹೆಸರು ಮುರ್ರಾಯ ಕೊಯೆನಿಗಿ.ಕರಿಬೇವಿನ ಎಲೆಗಳನ್ನು ಒಗ್ಗರಣೆ ಮಾತ್ರವಲ್ಲದೆ, ಚಟ್ನಿ, ಬಗೆ ಬಗೆಯ ತಿಂಡಿ ಮತ್ತು ಸಿಹಿತಿಂಡಿಗಳು ಸೇರಿದಂತೆ ವಿವಿಧ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ.
ಕರಿಬೇವಿನ ಎಲೆ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ಹೊಂದಿದೆ. ಕರಿಬೇವಿನ ಎಲೆ ಸೇವನೆಯು ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ. ಕರಿಬೇವಿನ ಎಲೆಯಲ್ಲಿ ಖನಿಜಗಳು, ಕ್ಯಾಲ್ಸಿಯಂ, ರಂಜಕ, ಫೈಬರ್, ಕಾರ್ಬೋಹೈಡ್ರೇಟ್, ಮೆಗ್ನೀಸಿಯಮ್ ಮತ್ತು ಕಬ್ಬಿಣದಂತಹ ಪೋಷಕಾಂಶಗಳಿದ್ದು ದೇಹವನ್ನು ಆರೋಗ್ಯಕರವಾಗಿರಿಸುತ್ತದೆ.
ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 3 – 4 ಕರಿಬೇವಿನ ಎಲೆಗಳನ್ನು ಅಗಿದು ತಿನ್ನಬೇಕು. ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ನಿಯಂತ್ರಣದಲ್ಲಿರುತ್ತದೆ. ಕರಿಬೇವಿನ ಎಲೆಗಳ ಸೇವನೆಯು ಇನ್ಸುಲಿನ್ ಮಟ್ಟವನ್ನು ಸುಧಾರಿಸುವ ಮೂಲಕ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ. ಕರಿಬೇವಿನ ಎಲೆಯಲ್ಲಿರುವ ಫೀನಾಲಿಕ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕರಿಬೇವಿನ ಎಲೆಯ ಜ್ಯೂಸ್ ಮಾಡಿ ಕುಡಿಯುವುದರಿಂದಲೂ ಮಧುಮೇಹ ನಿಯಂತ್ರಿಸಬಹುದು. ಇದರಿಂದ ಹೃದಯದ ಆರೋಗ್ಯವೂ ಚೆನ್ನಾಗಿರುತ್ತದೆ.