ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ( Chief Minister Basavaraj Bommai ) ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ( Cabinet Meeting ) ನಡೆಯಿತು. ಈ ಸಭೆಯಲ್ಲಿ ನೂತನ ಮರಳು ನೀತಿಗೆ ಸಚಿವ ಸಂಪುಟ ಅನುಮೋದಿಸಿದ್ದು, ಈ ಹಿನ್ನಲೆಯಲ್ಲಿ ಇನ್ಮುಂದೆ ಮೆಟ್ರಿಕ್ ಟನ್ ಮರಳು ರೂ.700 ರೂಪಾಯಿಗೆ ಲಭ್ಯವಾಗಲಿದೆ.
ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲೂ ಮರಳು ಸಿಗಲಿದೆ. ಈ ಮೂಲಕ ಮನೆ ಕಟ್ಟೋರಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ.
ಬೆಂಗಳೂರಿನ ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿರುವಂತ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯ ಮುಕ್ತಾಯಗೊಂಡ ನಂತ್ರ, ಸುದ್ದಿಗೋಷ್ಠಿಯಲ್ಲಿ ಸಚಿವ ಸಂಪುಟ ಸಭೆಯ ಮುಖ್ಯಾಂಶಗಳನ್ನು ಸಚಿವ ಜೆಸಿ ಮಾಧುಸ್ವಾಮಿ ನೀಡಿ, ಇಂದಿನ ಸಚಿವ ಸಂಪುಟ ಸಭೆಯಲ್ಲಿ ನೂತನ ಮರಳು ನೀತಿಗೆ ಅವಕಾಶ ನೀಡಲಾಗಿದೆ ಎಂದರು.
ಮುಂದುವರೆದು, ನೂತನ ಮರಳು ನೀತಿಯಂತೆ ಗ್ರಾಮಪಂಚಾಯ್ತಿ ವ್ಯಾಪ್ತಿಗೆ ಅಧಿಕಾರಿ, ಮೆಟ್ರಿಕ್ ಟನ್ ಗೆ 700 ರೂ.ನಂತೆ ಮಾರಾಟ ಮಾಡಲಿದ್ದಾರೆ. ನದಿ ಮರಳಿಗೆ 700 ರೂ ಫಿಕ್ಸ್ ಮಾಡಲಾಗಿದೆ. ಗ್ರಾಮ ಪಂಚಾಯ್ತಿಯವರಿಗೆ ಮರಳು ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಮಾರಾಟದ ಶೇ.25ರಷ್ಟು ಗ್ರಾಮ ಪಂಚಾಯ್ತಿಗೆ ನೀಡಲಾಗುತ್ತದೆ. ಇದನ್ನು ನೋಡಿಕೊಳ್ಳಲು ಅಥಾರಿಟಿ ರಚನೆ ಮಾಡಲಾಗುತ್ತದೆ ಎಂದರು.
ದಕ್ಷಿಣಕನ್ನಡದಲ್ಲಿ ಮರಳು ತೆಗೆಯಲು ಅವಕಾಶ ನೀಡಲಾಗಿದೆ. ಸಾಂಪ್ರದಾಯಿಕ ಮರಳು ತೆಗೆಯಲು ಅವಕಾಶ ನೀಡಲಾಗಿದೆ. ಮೆಷಿನರಿ ಯೂಸ್ ಮಾಡದಂತೆ ಸೂಚನೆ ನೀಡಲಾಗಿದೆ. ಗ್ರಾ.ಪಂ ಪರ್ಮಿಷನ್ ಪಡೆದು ಮರಳು ಪಡೆಯಬಹುದು ಎಂದು ತಿಳಿಸಿದರು.