ಮನೆ ಮನೆಗೆ ಸೋಲಾರ್ ಹಾಕ್ತಿದ್ದವ ಇಂದು ಹೊಂಬಾಳೆ ಬ್ಯಾನರ್ ನ ನಿರ್ದೇಶಕ!

Date:

ಹೊಂಬಾಳೆ ಫಿಲ್ಮ್ಸ್.. ಸದ್ಯ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಕಾರ್ಯನಿರತವಾಗಿರುವಂತ ಸಿನಿಮಾ ನಿರ್ಮಾಣ ಸಂಸ್ಥೆ. ಪುನೀತ್ ರಾಜ್ ಕುಮಾರ್ ಅಭಿನಯದ ನಿನ್ನಿಂದಲೇ ಚಿತ್ರದ ಮೂಲಕ ನಿರ್ಮಾಣವನ್ನು ಆರಂಭಿಸಿದ ಹೊಂಬಾಳೆ ನಂತರ ಮಾಸ್ಟರ್ ಪೀಸ್ ಸಿನಿಮಾಗೆ ಬಂಡವಾಳವನ್ನು ಹೂಡಿತು. ಹೀಗೆ ಮೊದಲೆರಡು ಸಿನಿಮಾಗಳನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ ನಂತರ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಗೆ ದೊಡ್ಡ ತಿರುವು ಕೊಟ್ಟ ಚಿತ್ರ ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ. ಹೀಗೆ ಸಂತೋಷ್ ಆನಂದ್ ರಾಮ್ ನಿರ್ದೇಶನ ಮತ್ತು ಪುನೀತ್ ಅಭಿನಯದ ರಾಜಕುಮಾರ ಚಿತ್ರ ಹೊಂಬಾಳೆ ಫಿಲ್ಮ್ಸ್ ದಿಕ್ಕನ್ನೇ ಬದಲಾಯಿಸಿತು.

ಕನ್ನಡ ಚಿತ್ರರಂಗದ ಎಲ್ಲಾ ದಾಖಲೆಗಳನ್ನು ಮುರಿದ ರಾಜಕುಮಾರ ಇಂಡಸ್ಟ್ರಿ ಹಿಟ್ ಆಯಿತು. ರಾಜಕುಮಾರ ದಂತಹ ಇಂಡಸ್ಟ್ರಿ ಹಿಟ್ ಕೊಟ್ಟ ಹೊಂಬಾಳೆ ಫಿಲ್ಮ್ಸ್ ಕೆಜಿಎಫ್ ಚಿತ್ರವನ್ನು ನಿರ್ಮಿಸುವ ಮೂಲಕ ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿತು. ಇನ್ನು ಇದಾದ ಮೇಲೆ ಕೆಜಿಎಫ್ 2, ಯುವರತ್ನ, ಬಘೀರ, ಸಲಾರ್, ದ್ವಿತ್ವ, ರಿಚರ್ಡ್ ಆಂಟೋನಿ ಹೊಂಬಾಳೆ ಬ್ಯಾನರ್ ನಲ್ಲಿ ಘೋಷಣೆಯಾದವು. ಹೀಗೆ ಸಾಲು ಸಾಲು ಬಿಗ್ ಚಿತ್ರಗಳನ್ನ ಅನೌನ್ಸ್ ಮಾಡಿರುವ ಹೊಂಬಾಳೆ ಫಿಲ್ಮ್ಸ್ ಇದೀಗ ಕನ್ನಡದ ಪ್ರತಿಭಾವಂತ ನಿರ್ದೇಶಕ ರಿಷಬ್ ಶೆಟ್ಟಿ ಮುಂದಿನ ಚಿತ್ರವಾದ ಕಾಂತಾರ ಸಿನಿಮಾಗೆ ಬಂಡವಾಳ ಹೂಡಲು ಮುಂದಾಗಿದೆ.

 

ಇತ್ತೀಚೆಗಷ್ಟೇ ಈ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿದೆ. ನಿರ್ದೇಶನ ಮಾಡಿ ಮೂರ್ನಾಲ್ಕು ವರ್ಷಗಳನ್ನೇ ಕಳೆದಿದ್ದಾರೆ ರಿಷಭ್ ಶೆಟ್ಟಿ ಮತ್ತೆ ಡೈರೆಕ್ಟರ್ ಕ್ಯಾಪ್ ಧರಿಸಿ ಕೆಲಸ ನಿರ್ವಹಿಸಲು ಮುಂದಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಬೇಕೆಂಬ ಹಂಬಲವನ್ನು ಹೊಂದಿದ್ದ ರಿಷಬ್ ಶೆಟ್ಟಿ ಹಲವಾರು ಕಷ್ಟದ ಹಾದಿಯನ್ನು ತುಳಿದು ಇಂದು ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ದೇಶನ ಮಾಡುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ಇನ್ನು ಚಿತ್ರರಂಗಕ್ಕೆ ಕಾಲಿಡುವ ಮುನ್ನ ನೀರಿನ ಸಪ್ಲೈ, ಮನೆ ಮನೆಗಳಿಗೆ ಸೋಲಾರ್ ಹಾಕುವ ಕೆಲಸ ಮಾಡುತ್ತಿದ್ದ ರಿಷಬ್ ಶೆಟ್ಟಿ ಇಂದು ಹೊಂಬಾಳೆ ಫಿಲ್ಮ್ಸ್ ಸಂಸ್ಥೆಗೆ ಚಿತ್ರ ನಿರ್ದೇಶನ ಮಾಡುತ್ತಿರುವುದು ನಿಜಕ್ಕೂ ದೊಡ್ಡ ಯಶಸ್ಸೇ ಸರಿ..

Share post:

Subscribe

spot_imgspot_img

Popular

More like this
Related

ವಸತಿ ರಹಿತ ಮೀನುಗಾರರಿಗೆ 10,000 ವಸತಿ ನೀಡಿದ್ದೇವೆ: ಸಚಿವ ಮಂಕಾಳ ಎಸ್. ವೈದ್ಯ

ವಸತಿ ರಹಿತ ಮೀನುಗಾರರಿಗೆ 10,000 ವಸತಿ ನೀಡಿದ್ದೇವೆ: ಸಚಿವ ಮಂಕಾಳ ಎಸ್....

ನವನಗರದಲ್ಲಿ 200 ಎಕರೆ ಪ್ರದೇಶದಲ್ಲಿನ ವಸತಿ ನಿವೇಶಗಳನ್ನು ವಾಣಿಜ್ಯ ನಿವೇಶನಗಳನ್ನಾಗಿ ಪರಿವರ್ತನೆ ಮಾಡಲು ಪ್ರಸ್ತಾವನೆ: ಡಿ.ಕೆ.ಶಿವಕುಮಾರ್

ನವನಗರದಲ್ಲಿ 200 ಎಕರೆ ಪ್ರದೇಶದಲ್ಲಿನ ವಸತಿ ನಿವೇಶಗಳನ್ನು ವಾಣಿಜ್ಯ ನಿವೇಶನಗಳನ್ನಾಗಿ ಪರಿವರ್ತನೆ...

ಸಿಎಂಗೆ ಮತ್ತೆ ಶುರುವಾಯ್ತು ಮುಡಾ ಟೆನ್ಷನ್: ಲೋಕಾಯುಕ್ತರಿಂದ ಇಂದು ಅಂತಿಮ ವರದಿ

ಸಿಎಂಗೆ ಮತ್ತೆ ಶುರುವಾಯ್ತು ಮುಡಾ ಟೆನ್ಷನ್: ಲೋಕಾಯುಕ್ತರಿಂದ ಇಂದು ಅಂತಿಮ ವರದಿ ಬೆಂಗಳೂರು: ಮುಖ್ಯಮಂತ್ರಿ...

ಬಸವ ಅಂತಾರಾಷ್ಟ್ರೀಯ ಮ್ಯೂಸಿಯಂಗೆ ರೂ. 64.43 ಕೋಟಿ ಬಿಡುಗಡೆ: ಸಚಿವ ಕೃಷ್ಣ ಬೈರೇಗೌಡ

ಬಸವ ಅಂತಾರಾಷ್ಟ್ರೀಯ ಮ್ಯೂಸಿಯಂಗೆ ರೂ. 64.43 ಕೋಟಿ ಬಿಡುಗಡೆ: ಸಚಿವ ಕೃಷ್ಣ...