ಮಳೆಯ ಅವಾಂತರ: ಬೆಳೆ ಇದ್ದ ಜಮೀನು ಜಲಾವೃತ

0
36

ಇಷ್ಟು ದಿನ ಮಳೆ ಆಗ್ಲಪ್ಪ ನೆಲ ಕಚ್ಚಿರೋ ಬೆಳೆ ಸರಿಯಾಗ್ಲಿ ಅನ್ನೋ ಬೇಡಿಕೆ ಇತ್ತು. ಆದ್ರೆ ವರುಣ ಅದಕ್ಕೆ ಉಲ್ಟಾ ಹೊಡೆದಿದ್ದಾನೆ. 

 

ಬಿದ್ದ ಬಾರಿ ಮಳೆಯಿಂದಾಗಿ ರೈತನ ಮೊಗದಲ್ಲಿ ಖುಷಿ ಮಾಯವಾಗಿ ನೋವು ಆವರಿಸಿಕೊಂಡಿದೆ.

ಜಿಲ್ಲೆಯಲ್ಲಿ ಕಳೆದ ಎರಡು ದಿನದಿಂದ ಬಾರಿ ಮಳೆ ಸುರಿಯುತ್ತಿದೆ. ಇದರ ಪರಿಣಾಮ ಹೊನ್ನೂರಿನ ಕೆರೆ ಕೋಡಿ ಬಿದ್ದಿದೆ. ಮಲ್ಲಶೆಟ್ಟಿಹಳ್ಳಿ, ಕೊಗ್ಗುನೂರು ಸೇರಿದಂತೆ ಹಲವು ಗ್ರಾಮಗಳಿಗೆ ನೀರು ನುಗ್ಗಿದೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸಿಕೊಡುವ ರಸ್ತೆಗಳು ನೀರಿನಲ್ಲಿ ಮುಚ್ಚಿ ಹೋಗಿವೆ. ರಸ್ತೆಗಳು ಕೆರೆಯಂತೆ ಕಾಣುತ್ತಿವೆ. ಇದರಿಂದ ಜನಜೀವನವೂ ಅಸ್ತವ್ಯಸ್ತವಾಗಿದೆ. ರೈತನ ಬದುಕು ಮೂರಾಬಟ್ಟೆಯಾಗಿದೆ.

ಅಡಿಕೆ, ಮೆಕ್ಕೆಜೋಳ, ತೆಂಗು ಬೆಳೆದ ಸುಮಾರು 500ಕ್ಕೂ ಹೆಚ್ಚು ಎಕರೆಗೆ ನೀರು ನುಗ್ಗಿದೆ. 300ಕ್ಕೂ ಅಧಿಕ ಬೋರ್ ವೆಲ್ ಗಳು ಮುಚ್ಚಿ ಹೋಗಿವೆ. ಮಳೆಯಿಂದ ಸಾಕಷ್ಟು ನಷ್ಟ ಉಂಟಾಗಿದ್ದು, ಪರಿಹಾರ ನೀಡಿ ಎಂದು ಗ್ರಾಮಸ್ಥರು ಅಧಿಕಾರಿಗಳ ಬಳಿ ಕೇಳುತ್ತಿದ್ದಾರೆ.

LEAVE A REPLY

Please enter your comment!
Please enter your name here