ಇಷ್ಟು ದಿನಗಳ ಕಾಲ ಮಳೆಯಿಂದಾಗಿ ಕರಾವಳಿ ಭಾಗದಲ್ಲಿ ಭೂಕುಸಿತ ಆಯಿತು , ಕೊಡಗಿನಲ್ಲಿ ಭೂಕುಸಿತ ಆಯ್ತು ಅಂತ ಸುದ್ದಿಗಳನ್ನು ಕೇಳ್ತಾ ಇದ್ವಿ. ಅದೇ ರೀತಿ ಮೈಸೂರು ಭಾಗ ಸರಿ ಯಾವುದೇ ಮಳೆಗೂ ಬಗ್ಗಲ್ಲ ತುಂಬಾ ಸುರಕ್ಷಿತ ತಾಣ ಎಂದೆಲ್ಲಾ ಹೇಳಲಾಗುತ್ತಿತ್ತು. ಆದರೆ ನಿನ್ನೆ ಮೊನ್ನೆಯಿಂದ ಧಾರಾಕಾರವಾಗಿ ಎಡಬಿಡದೆ ಸುರಿಯುತ್ತಿರುವ ಮಳೆಗೆ ಮೈಸೂರಿನ ಭೂಮಿ ಕೂಡ ನಲುಗಿದೆ.
ಹೌದು ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಇಂದು ಮಧ್ಯಾಹ್ನ ಚಾಮುಂಡಿ ಬೆಟ್ಟದಲ್ಲಿನ ವ್ಯೂ ಪಾಯಿಂಟ್ ಬಳಿಯ ಭೂಮಿ ಕುಸಿದಿದೆ. ಅಲ್ಲೇ ಇದ್ದ ತಡೆ ಕಟ್ಟಡ ಮತ್ತು ಭೂಮಿ ಭಾಗಶಃ ಕುಸಿದಿದೆ. ಇನ್ನು ಭೂಮಿ ಕುಸಿಯುತ್ತಿದ್ದಂತೆ ಬ್ಯಾರಿಕೇಡ್ಗಳನ್ನು ಹಾಕಲಾಗಿದ್ದು ಜನರು ಓಡಾಡದಂತೆ ಆಗಾಗ ಭೂ ಕುಸಿತದ ಬಗೆಗಿನ ಮಾಹಿತಿ ನೀಡಲಾಗುತ್ತಿದೆ.