ಮಹಿಳೆಯರು ಶನಿಪೂಜೆ ಮಾಡಬಹುದೇ!? ಶನಿವಾರದ ಪೂಜೆ ಹೇಗಿರಬೇಕು!? ಇಲ್ಲಿದೆ ಡೀಟೈಲ್ಸ್!

Date:

ಮಹಿಳೆಯರು ಶನಿಪೂಜೆ ಮಾಡಬಹುದೇ!? ಶನಿವಾರದ ಪೂಜೆ ಹೇಗಿರಬೇಕು!? ಇಲ್ಲಿದೆ ಡೀಟೈಲ್ಸ್!

ಶನಿವಾರದಂದು ಶನಿಯನ್ನು ಪೂಜಿಸುವಾಗ ಈ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಏನು ತಪ್ಪಾಗದಂತೆ ಶನಿಯನ್ನು ಪೂಜಿಸಿ.

ಮಹಿಳೆಯರು ಶನಿ ಪೂಜೆ ಮಾಡಬಹುದೇ..?

ಸಾಮಾನ್ಯವಾಗಿ ಎಲ್ಲರೂ ಶನಿದೇವನನ್ನು ಪೂಜಿಸುತ್ತಾರೆ. ಆದರೆ ಶನಿದೇವನನ್ನು ಪುರುಷರು ಮತ್ತು ಮಹಿಳೆಯರು ಇಬ್ಬರೂ ಪೂಜಿಸಬಹುದೇ ಎನ್ನುವುದು ದೊಡ್ಡ ಪ್ರಶ್ನೆ. ಹೌದು, ಸಹಜವಾಗಿ ಪುರಾಣಗಳಲ್ಲಿ ಮತ್ತು ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಿರುವಂತೆ ಮಹಿಳೆಯರು ಶನಿ ದೇವನನ್ನು ಪೂಜಿಸುವಾಗ ಮುಟ್ಟಬಾರದು ಮತ್ತು ತೈಲವನ್ನು ಅರ್ಪಿಸಬಾರದು. ಮಹಿಳೆಯರು ಶನಿ ಪೂಜೆಯಲ್ಲಿ ಈ ಕ್ರಮಗಳನ್ನು ಅನುಸರಿಸಿದರೆ ಆತನು ನಿಮ್ಮ ಮೇಲೆ ಕೋಪಿಸಿಕೊಳ್ಳುವನು. ಆದರೆ ಶನಿಯ ಕೋಪವನ್ನು ಕಡಿಮೆ ಮಾಡಿಕೊಳ್ಳಲು ಇಚ್ಛಿಸುವವರು ಹಾಗೂ ಶನಿದೇವನ ಆಶೀರ್ವಾದವನ್ನು ಪಡೆದುಕೊಳ್ಳಲು ಬಯಸುವವರು ಕೆಲವೊಂದು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು, ಅರ್ಚಕರ ಸಲಹೆಯ ಮೇರೆಗೆ ಶನಿಯನ್ನು ಪೂಜಿಸಬಹುದು.

ಶನಿ ಪೂಜೆಯಲ್ಲಿ ಈ ವಸ್ತುಗಳನ್ನು ಉಪಯೋಗಿಸದಿರಿ:-

ನೀವು ಶನಿವಾರದಂದು ಅಥವಾ ಶನಿಯನ್ನು ಪೂಜಿಸುವಾಗ ಪೂಜೆಗೆ ಅವಶ್ಯಕ ಸಾಮಾಗ್ರಿಗಳನ್ನು ಯಾವ ಲೋಹದ ಪಾತ್ರೆಯಲ್ಲಿ ಇಟ್ಟುಕೊಳ್ಳಬೇಕೆಂಬುದರತ್ತ ಗಮನಹರಿಸಬೇಕು. ಶನಿದೇವನಿಗೆ ಪೂಜೆಗೆ ಬಳಸುವ ವಸ್ತುಗಳನ್ನು ಎಂದಿಗೂ ತಾಮ್ರದ ಪಾತ್ರೆಯಲ್ಲಿ ಇಟ್ಟುಕೊಳ್ಳಬೇಡಿ. ಹಾಗೂ ಅವನಿಗೆ ತಾಮ್ರದ ಪಾತ್ರೆಯಿಂದ ನೀರನ್ನು ಕೂಡ ನೀಡಬೆಡಿ. ಶನಿ ಪೂಜೆಯಲ್ಲಿ ಯಾವಾಗಲು ಕಬ್ಬಿಣದ ಪಾತ್ರೆಯನ್ನು ಉಪಯೋಗಿಸಬೇಕು.

ತಾಮ್ರದ ಪಾತ್ರೆಯನ್ನು ಶನಿ ದೇವನ ತಂದೆಯಾದ ಸೂರ್ಯದೇವನ ಪೂಜೆಯಲ್ಲಿ ಬಳಸಲಾಗುತ್ತದೆ. ಶನಿದೇವನು ಕಬ್ಬಿಣದ ವಸ್ತುಗಳನ್ನು ಇಷ್ಟಪಡುವುದರಿಂದ ಅವನ ಪೂಜೆಯಲ್ಲಿ ತಪ್ಪದೇ ಕಬ್ಬಿಣದ ಪಾತ್ರೆಗಳನ್ನು ಬಳಸಿ. ಕಬ್ಬಿಣದ ದೀಪಗಳನ್ನು ಮಾತ್ರ ಪೂಜೆಯಲ್ಲಿ ಬಳಸಬೇಕು. ಮಹಿಳೆಯರು ಶನಿದೇವನಿಗೆ ದೀಪವನ್ನು ಬೆಳಗಬಹುದು ಆದರೆ ಅವುಗಳನ್ನು ಮುಟ್ಟುವಂತಿಲ್ಲ.

ಶನಿದೇವನ ಕೋಪಕ್ಕೆ ಪರಿಹಾರ:

ಶನಿದೇವನ ಕೋಪದಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ತಪ್ಪದೇ ಈ ಕ್ರಮಗಳನ್ನು ಅನುಸರಿಸಿ:

51 ಶನಿವಾರ ಉಪವಾಸ ವ್ರತವನ್ನು ಕೈಗೊಂಡು ಸೂರ್ಯಾಸ್ತದ ನಂತರ ಅಕ್ಕಿ ಮತ್ತು ಕಪ್ಪು ಉದ್ದಿನಿಂದ ತಯಾರಿಸಿದ ಕಿಚಡಿಯನ್ನು ಸೇವಿಸಿ.
ನೀಲಮಣಿ ಧರಿಸಿ
14 ಮುಖಿ ಅಥವಾ ಸಪ್ತಮುಖಿ ರುದ್ರಾಕ್ಷಿಯನ್ನು ಧರಿಸಿ. ಅಥವಾ 36 ಮಣಿಯುಳ್ಳ ಶನಿಮಾಲೆ ಧರಿಸಿ.
ಶನಿವಾರದಂದು ಶನಿದೇವನಿಗೆ ತುಪ್ಪದ ದೀಪವನ್ನು ಹಚ್ಚಿ, ಶನಿ ಮಂತ್ರವನ್ನು ಪಠಿಸಬೇಕು.
ಶನಿವಾರದಂದು ಕಪ್ಪು ಎಳ್ಳನ್ನು ದಾನ ಮಾಡಬೇಕು.
ಶಿವನನ್ನು ಮತ್ತು ಹನುಮಂತನನ್ನು ಪೂಜಿಸಬೇಕು. ಹಾಗೂ ಹನುಮಾನ್‌ ಮಂತ್ರವನ್ನು ಮತ್ತು ಮಹಾಮೃತ್ಯುಂಜಯ ಮಂತ್ರವನ್ನು ಜಪಿಸಬೇಕು

ಶನಿದೇವನಿಗೆ ಪ್ರಿಯವಾದ ಬಣ್ಣವಿದು

ಭಗವಾನ್‌ ಶನಿದೇವನ ಮುಂದೆ ದೀಪವನ್ನು ಬೆಳಗುವುದು ಅತ್ಯಂತ ಶುಭವಾಗಿದೆ. ಒಂದು ವೇಳೆ ನೀವು ಶನಿದೇವನ ಮುಂದೆ ದೀಪವನ್ನು ಬೆಳಗುವುದಾದರೆ, ದೀಪವನ್ನು ಬೆಳಗುವ ಮುನ್ನ ನೀವು ಸ್ವಚ್ಛವಾಗಿರಬೇಕು. ಪೂಜೆಗೂ ಮುನ್ನ ಸ್ನಾನ ಮಾಡಿ, ಶುದ್ಧವಾದ ಬಟ್ಟೆಯನ್ನು ಧರಿಸಬೇಕು. ಶುಚಿತ್ವವು ಭಗವಾನ್‌ ಶನಿದೇವನಿಗೆ ಅತ್ಯಂತ ಪ್ರಿಯವಾಗಿದೆ. ಮತ್ತು ಇದರೊಂದಿಗೆ ಶನಿದೇವನು ಕಪ್ಪು ಮತ್ತು ನೀಲಿ ಬಣ್ಣವನ್ನು ಪ್ರೀತಿಸುತ್ತಾರೆ. ಆದ್ದರಿಂದ ಪೂಜೆಯಲ್ಲಿ ಅವರ ಪ್ರೀತಿಯ ಬಣ್ಣದ ಬಟ್ಟೆಯನ್ನು ಧರಿಸಬೇಕು. ಇದು ಪೂಜೆಯ ಫಲವನ್ನು ನೀಡುತ್ತದೆ.

ಇದೇ ದಿಕ್ಕಿನಲ್ಲಿ ಶನಿದೇವನನ್ನು ಪೂಜಿಸಿ:-

ಶನಿದೇವನ ಪೂಜೆಯಲ್ಲಿ ಪೂಜೆಯನ್ನು ಮಾಡುವ ದಿಕ್ಕಿನತ್ತ ವಿಶೇಷ ಕಾಳಜಿ ವಹಿಸಬೇಕು. ಪೂರ್ವ ದಿಕ್ಕು ಶನಿಯನ್ನು ಪೂಜಿಸಲು ಉತ್ತಮ ದಿಕ್ಕಾಗಿದೆ. ಆದರೆ ನೀವು ಪಶ್ಚಿಮ ದಿಕ್ಕಿಗೆ ಎದುರಾಗಿ ಕುಳಿತು ಭಗವಾನ್‌ ಶನಿಯನ್ನು ಪೂಜಿಸಬೇಕು. ಯಾಕೆಂದರೆ ಶನಿದೇವನನ್ನು ಪಶ್ಚಿಮ ದಿಕ್ಕಿನ ಅಧಿಪತಿಯೆಂದು ಪರಿಗಣಿಸಲಾಗಿದೆ. ದೇವರ ಪೂಜೆಯಲ್ಲಿ ಸರಿಯಾದ ದಿಕ್ಕನ್ನು ಅಯ್ದುಕೊಳ್ಳುವುದು ಅತ್ಯಂತ ಮುಖ್ಯವಾದ ಅಂಶವಾಗಿದೆ.

ಶನಿದೇವನನ್ನು ದಿಟ್ಟಸಿ ನೋಡದಿರಿ

ಸಾಮಾನ್ಯವಾಗಿ, ನಾವು ದೇವರನ್ನು ಮತ್ತು ದೇವತೆಗಳನ್ನು ನೋಡುವಾಗ ಅಥವಾ ಅವರನ್ನು ಪೂಜಿಸುವಾಗ ನಾವು ನೇರವಾಗಿ ಅವರನ್ನು ಮುಖವನ್ನು ನೋಡಿ ಅಂದವನ್ನು ಹೊಗಳಿ ಪೂಜೆಯನ್ನು ಮಾಡುತ್ತೇವೆ. ಇದಕ್ಕಿಂತಲೂ ಮುಖ್ಯವಾಗಿ ನಮ್ಮ ಕಣ್ಣುಗಳು ದೇವರ ಕಣ್ಣುಗಳನ್ನು ಭೇಟಿಯಾಗುತ್ತದೆ. ಆದರೆ ಶನಿದೇವನನ್ನು ಪೂಜಿಸುವಾಗ ನೀವು ಹೀಗೆ ಮಾಡುವಂತಿಲ್ಲ. ನೀವು ಶನಿದೇವನ ವಿಗ್ರಹವನ್ನು ಅಥವಾ ಫೊಟೋವನ್ನು ನೋಡಿದಾಗ ನಿಮ್ಮ ತಲೆ ಬಾಗಿರಬೇಕು, ಕಣ್ಣುಗಳು ಕೆಳಗಿರಬೇಕು. ಕೇವಲ ಮಹಿಳೆಯರು ಮಾತ್ರವಲ್ಲ, ಪುರುಷರು ಕೂಡ ಶನಿದೇವನ ಪೂಜೆಯಲ್ಲಿ ಈ ಕ್ರಮಗಳನ್ನು ಅನುಸರಿಸಬೇಕು. ಭಗವಾನ್‌ ದೃಷ್ಟಿಯನ್ನು ನೀವು ಎದುರಿಸಿದರೆ ಆತನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.

Share post:

Subscribe

spot_imgspot_img

Popular

More like this
Related

ಕಲ್ಯಾಣ ಕರ್ನಾಟಕದ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ: ಸಿಸಿ ಪಾಟೀಲ್ ಬೇಸರ

ಕಲ್ಯಾಣ ಕರ್ನಾಟಕದ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ: ಸಿಸಿ ಪಾಟೀಲ್ ಬೇಸರ ಬೆಂಗಳೂರು:-ಕಲ್ಯಾಣ...

ಅಕ್ರಮ ಆಸ್ತಿ ಕೇಸ್: ಶೃಂಗೇರಿ ಶಾಸಕ ರಾಜೇಗೌಡ್ರಿಗೆ ಲೋಕಾಯುಕ್ತ ಶಾಕ್

ಅಕ್ರಮ ಆಸ್ತಿ ಕೇಸ್: ಶೃಂಗೇರಿ ಶಾಸಕ ರಾಜೇಗೌಡ್ರಿಗೆ ಲೋಕಾಯುಕ್ತ ಶಾಕ್ ಚಿಕ್ಕಮಗಳೂರು: ಶೃಂಗೇರಿ...

ನವರಾತ್ರಿ ಒಂಬತ್ತನೇ ದಿನದ ಪೂಜೆ – ಸಿದ್ಧಿದಾತ್ರಿಯ ಆರಾಧನೆ !

ನವರಾತ್ರಿ ಒಂಬತ್ತನೇ ದಿನದ ಪೂಜೆ – ಸಿದ್ಧಿದಾತ್ರಿಯ ಆರಾಧನೆ ! ಒಂಬತ್ತನೇ ದಿನ...

ಹಿರಿಯ ನಟ, ನಿರ್ದೇಶಕ,ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ನಿಧನ!

ಹಿರಿಯ ನಟ, ನಿರ್ದೇಶಕ,ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ನಿಧನ! ಹೃದಯಾಘಾತದಿಂದ ಹಿರಿಯ ರಂಗಭೂಮಿ...