ಇತ್ತೀಚಿಗೆ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್ ಹೆಚ್ಚಾಗೇ ಸೌಂಡ್ ಮಾಡ್ತಿದೆ. ದರ್ಶನ್ & ಕಿಚ್ಚ ನಡುವೆ ಪೈಲ್ವಾನ್ ವಿಚಾರವಾಗಿ ಟ್ವಿಟರ್ ವಾರ್ ಆಗಿದ್ದು ಗೊತ್ತೇ ಇದೆ. ಈ ಟ್ವಿಟರ್ ವಾರ್ ವೇಳೆ ಕಿಚ್ಚ ಅವರು ಕೌಂಟರ್ ಕೊಡಲು ಹೋಗಿ ಯಡವಟ್ಟು ಮಾಡಿಕೊಂಡಿದ್ದರು.
ಹೌದು ನಾನು & ನನ್ನ ಫ್ಯಾನ್ಸ್ ಕೈಗೆ ಹಾಕಿರೋದು ಖಡಗ , ಬಳೆಯಲ್ಲ ಎಂಬ ಟ್ವೀಟ್ ಮಾಡಿ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಮಹಿಳೆಯರು ಅಸಮರ್ಥರು ಎಂದು ಪರೋಕ್ಷವಾಗಿ ಕಿಚ್ಚ ಹೇಳಿದ್ದಾರೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಕಿಚ್ಚ ಈ ಟ್ವೀಟ್ ಬಗ್ಗೆ ಮತನಾಡಿದ್ದು ನಾನು ಮಹಿಳೆಯರ ವಿರುದ್ಧ ಮಾತನಾಡಿಲ್ಲ ತಪ್ಪಾಗಿ ಅರ್ಥೈಸಬೇಡಿ ಎಂದಿದ್ದಾರೆ. ನನಗೆ ಮಹಿಳೆಯರ ಮೇಲೆ ಗೌರವ ಇದೆ , ನನ್ನ ಅಮ್ಮ ಸಹ ಕೈಗೆ ಬಳೆ ಹಾಕ್ತಾರೆ ನಾನು ಮಹಿಳೆಯರಿಗೆ ಅಗೌರವ ಆಗೋ ಅರ್ಥದಲ್ಲಿ ಆ ಟ್ವೀಟ್ ಮಾಡಿಲ್ಲ ಎಂದಿದ್ದಾರೆ.