ನಿನ್ನೆಯಷ್ಟೇ ನೂತನ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟದ ಸದಸ್ಯರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಸಹ ಆಗಮಿಸಿದ್ದರು.
ಈ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಬಿಜೆಪಿ ಪಕ್ಷದ ವಿವಿಧ ಕಾರ್ಯಕರ್ತರು ಪಕ್ಷದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರ ಆಶೀರ್ವಾದ ತೆಗೆದುಕೊಳ್ಳಲು ಮುಂದಾದರು. ಇದೇ ವೇಳೆ ಮಹಿಳಾ ಕಾರ್ಯಕರ್ತೆಯೊಬ್ಬರು ಯಡಿಯೂರಪ್ಪನವರ ಆಶೀರ್ವಾದ ತೆಗೆದುಕೊಳ್ಳಲು ಮುಂದಾದಾಗ ಬಿ ಎಸ್ ಯಡಿಯೂರಪ್ಪನವರ ಕೈಗೆ ಮಹಿಳೆಯರ ಸೀರೆ ಪಿನ್ ಚುಚ್ಚಿದೆ.
ಹೀಗೆ ಸೀರೆ ಪಿನ್ ಬೆರಳಿಗೆ ಚುಚ್ಚಿದ ನೋವಲ್ಲೇ ಮಹಿಳೆಗೆ ಆಶೀರ್ವದಿಸಿ ನಗುನಗುತ್ತಾ ಮಾತನಾಡಿಸಿ ಬಿಎಸ್ ಯಡಿಯೂರಪ್ಪನವರು ಕಳುಹಿಸಿಕೊಟ್ಟರು.