ಮಾಧ್ಯಮಗಳು ಯಾವ ಒಳ್ಳೆ ಕೆಲಸ ಹೇಳ್ತಿಲ್ಲ ಎಂದ್ರು ಸಿ ಎಂ ಕುಮಾರ ಸ್ವಾಮಿ !?

admin
By admin
1 Min Read

ರೈತರ ಸಾಲಮನ್ನಾ ವಿಚಾರಕ್ಕೆ‌ ಸಂಬಂಧ ಪಟ್ಟಂತೆ ಸಾಕಷ್ಟು ಆರೋಪಗಳನ್ನ ಕೇಳಬೇಕಾಗಿದೆ. ದೇಶದಲ್ಲೇ ಸಾಲಮನ್ನಾ ವಿಚಾರದಲ್ಲಿ ಹೆಚ್ಚು ಪಾರದರ್ಶಕವಾಗಿ ಕೆಲಸ ಮಾಡಿದ್ದೇವೆ ಆದರೂ ಮಾಧ್ಯಮಗಳು ಉತ್ತಮ ಕೆಲಸ ಹೇಳುತ್ತಿಲ್ಲ ಅಂತ ಸಿಎಂ ದೂರಿದ್ದಾರೆ.

ಯಾರದ್ದೋ ತಪ್ಪನ್ನ ಸರ್ಕಾರದ ಮೇಲೆ ಹಾಕುವ ಕೆಲಸ ನಡೆದಿದೆ. ನಾವು ಮಾಡುವ ಒಳ್ಳೆಯ ಕೆಲಸವನ್ನ ನಮ್ಮ ಮಾದ್ಯಮಗಳೇ ಹೇಳ್ತಿಲ್ಲ.

ರಾಜ್ಯದಲ್ಲಿ ಭೂಮಿಗೆ ಸಂಬಂಧಿಸಿದ ಮತ್ತು ಕಟ್ಟಡ ನಕ್ಷೆಗಳ ಲೈಸೆನ್ಸ್ ಸರಳಗೊಳಿಸಲಾಗಿದೆ. ಸಮಯ ವ್ಯರ್ಥ ಮಾಡದೆ, ಭ್ರಷ್ಟಾಚಾರಕ್ಕೆ ಅವಕಾಶ ನೀಡದ ಯೋಜನೆಗೆ ಇಂದು ಚಾಲನೆ ನೀಡಲಾಗಿದೆ. ಸಬ್ ಹರ್ಬನ್ ರೈಲ್ವೇಗೂ ಕೆಲವೇ ದಿನಗಳಲ್ಲಿ ಚಾಲನೆ ನೀಡಲಾಗುವುದು ಎಂದರು.

ಇನ್ನು ಇದೇ ವೇಳೆ, ಬರಗಾಲಕ್ಕೆ ಕೈಗೊಂಡ ಕ್ರಮಗಳು ಹಾಗೂ ಮುಂಗಾರು ಮಳೆಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಿಎಂ ಚರ್ಚೆ ನಡೆಸಿದ್ದಾರೆ.

Share This Article