ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅವರು ಮಾಧ್ಯಮದವರ ವಿರುದ್ಧ ಮತ್ತೊಮ್ಮೆ ತುಂಬಾ ಸಿಟ್ಟಾಗಿದ್ದಾರೆ. ಯಾವುದೇ ರಿಯಾಕ್ಷನ್ ಕೊಡಲ್ಲ ಎಂದು ಕೆಂಡಾಮಂಡಲ ಆಗಿದ್ದಾರೆ.
ಸಿಎಂ ಸಾಹೆಬ್ರು ಮೀಡಿಯಾಗಳ ಮೇಲೆ ಹರಿಹಾಯ್ತಾ ಇರುವುದು ಇದು ಮೊದಲೇನು ಅಲ್ಲ.. ಈ ಹಿಂದೆ ಅನೇಕಬಾರಿ ಸಿಎಂ ಮಾಧ್ಯಮದವರ ವಿರುದ್ಧ ರೇಗಾಡಿದ್ದು ಇದೆ. ಇಂದು ದೋಸ್ತಿ ಸಭೆ ಆದ ಮೇಲೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಮುಖ್ಯಮಂತ್ರಿಯವರು ನಾನು ನಿಮ್ಮ ಜೊತೆ ಮಾತಾಡಬಾರದು ಅಂತ ನಿರ್ಧರಿಸಿ ಬಿಟ್ಟಿದ್ದೇನೆ. ನೀವು ಅದೇನು ಸ್ಟೋರಿ ಮಾಡಿಕೊಳ್ಳುತ್ತೀರೋ ಅದನ್ನು ಮಾಡಿಕೊಳ್ಳಿ. ಮಜಾ ಮಾಡಿ. ಅದೇನು ಚರ್ಚೆ ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ ಎಂದು ಫುಲ್ ಗರಂ ಆಗಿ ಪ್ರತಿಕ್ರಿಯೆ ನೀಡದೆ ಹೋದರು.
ಸಿಎಂ ಅವರ ಕೋಪಕ್ಕೆ ಕಾರಣ ಮ ಮೀಡಿಯಾಗಳಲ್ಲಿ ಪದೇ ಪದೇ ಅವರ ವಿರುದ್ಧವಾಗಿ ಪ್ರಚಾರ ಮಾಡಲಾಗುತ್ತಿದೆ ಎಂದಾಗಿದೆ. ಇದೇ ಕಾರಣಕ್ಕೆ ಸಿಎಂ ಮಾಧ್ಯಮಗಳ ಮೇಲೆ ಸಿಟ್ಟಾಗಿದ್ದಾರೆ. ಇನ್ನು ಯಾವತ್ತೂ ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಹೇಳಿಬಿಟ್ಟಿದ್ದಾರೆ.
ಮಾಧ್ಯಮಗಳ ಮೇಲೆ ಮುಖ್ಯಮಂತ್ರಿ ಕುಮಾರಸ್ವಾಮಿ ಕೆಂಡಾಮಂಡಲ ಆಗಲು ಅಸಲಿ ಕಾರಣ ಇದು..!
Date: