No menu items!
17.6 C
Munich
Wednesday, April 29, 2026

ಇದೊಂದು ರಾಂಗ್ ನಂಬರ್ ಮದ್ವೆ…ನಿಮಗೂ ಹೀಗೊಂದು ಲವ್ ಆಗಿತ್ತಾ?

Must read

ಇದೊಂದು ರಾಂಗ್​ ನಂಬರ್ ಮದುವೆ..! ನಿಮ್ಮ ಲೈಫ್​ನಲ್ಲೂ ಹೀಗೊಂದು ಲವ್ ಆಗಿದೆಯಾ..? ಇದೊಂದು ಇಂಟ್ರೆಸ್ಟಿಂಗ್ ಲವ್ ಸ್ಟೋರಿ.. ಬೆಳಗಾವಿ ಹುಡುಗನ, ಗುಜರಾತ್ ಹುಡುಗಿಯ ಪ್ರೇಮ್​ ಕಹಾನಿ..!
ಬೆಳಗಾವಿಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದ ಲಾರಿ ಚಾಲಕ ಜಾವೇದ್​ ಅಮೀದ್ ಖಾನ್ ಮತ್ತು ಗುಜರಾತ್​​ನ ಅಹ್ಮದಾಬಾದ್​ ಮೂಲದ ಲಾರಿ ಚಾಲಕನ ಮಗಳು ರೋಶನ್​ ಬಾನ್​ ಈ ಇಂಟ್ರೆಸ್ಟಿಂಗ್ ಲವ್ ಸ್ಟೋರಿಯ ನಾಯಕ-ನಾಯಕಿ.
ಅದು 2 ವರ್ಷದ ಹಿಂದಿನ ಒಂದು ದಿನ.. 23 ವರ್ಷದ ಜಾವೀದ್​ ಗೆ ಅನೌನ್​ ನಂಬರ್​ನಿಂದ ಮೊಬೈಲ್ ಕರೆಯೊಂದು ಬರುತ್ತದೆ. ಆ ಕಡೆಯಿಂದ ಕರೆ ಮಾಡಿದ್ದ ಯುವತಿ ರಾಂಗ್ ನಂಬರ್ ಎಂದು ಹೇಳಿ ಕಾಲ್ ಕಟ್​ ಮಾಡುತ್ತಾಳೆ. ಬಳಿಕ ಕುತೂಹಲದಿಂದ ಜಾವೀದ್ ಆ ನಂಬರ್ ಗೆ ವಾಪಸ್ ಕರೆ ಮಾಡುತ್ತಾರೆ. ಆಗ ಆಕೆಯ ಹೆಸರು, ಆಕೆ ತನ್ನ ಗೆಳತಿಗೆ ಕಾಲ್ ಮಾಡಲು ಹೋಗಿ ಜಾವೇದ್ ಅಮೀದ್​ ಗೆ ಕಾಲ್ ಬಂದಿತ್ತು. ಅವಳು ಅಹಮದಾಬಾದ್​​ ಬಳಿಯ ಸಂತರಾಂಪುರ ಗ್ರಾಮದ ನಿವಾಸಿ, ಲಾರಿ ಡ್ರೈವರ್ ಮಗಳು ಎಂದೆಲ್ಲಾ ತಿಳಿಯಿತು. ಇಬ್ಬರ ಪರಿಚಯ ಪ್ರೀತಿಗೆ ತಿರುಗಿತು. ಈಗ ಇಬ್ಬರೂ ತಮ್ಮ ಕುಟುಂಬದವರನ್ನು ಒಪ್ಪಿಸಿ ಮದುವೆ ಆಗಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article