ಉಪಚುನಾವಣೆಯಲ್ಲಿ ಪ್ರಚಾರದ ಸಮಯದಲ್ಲಿ ಒಬ್ಬರಮೇಲೊಬ್ಬರು ಮಾತಿನ ಸಮರಮಾಡುವುದು ಹೊಸದೇನಲ್ಲ ಹಾಗೆ ಯಡಿಯೂರಪ್ಪ ಅವರು ಬಾಯಿಗೆ ಬಂದಂತೆ ಮಾತನಾಡಿದರೆ ಮಾನ ನಷ್ಟ ಮೊಕದ್ದಮೆ ಹುಡುವುದ್ದಾಗಿ ಹೇಳಿಕೆನೀಡಿದ್ದರು ಅದಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಅವರು ಬಿಜೆಪಿ ಗೂಂಡಾ ಸಂಸ್ಕೃತಿಯಲ್ಲಿಯೇ ಚುನಾವಣೆ ಎದುರಿಸುತ್ತಿದೆ. ಯಡಿಯೂರಪ್ಪನವರು ಗೂಂಡಾಗಳನ್ನು ಹಿಂದೆ ಮುಂದೆ ಇಟ್ಟುಕೊಂಡು ಓಡಾಡುತ್ತಿದ್ದಾರೆ. ಜನರ ಮತ ಸೆಳೆಯಲು ಗೂಂಡಾ ವರ್ತನೆ ಮಾಡಲಾಗುತ್ತಿದೆ. ಎಲ್ಲಿಂದ ಹಣ ಸಂಗ್ರಹ ಮಾಡಿ ಸರ್ಕಾರ ಕೆಡವಿದರು ಎನ್ನುವುದು ಗೊತ್ತಿದೆ. ನನ್ನ ಬಳಿ ಸಾಕ್ಷಿ ಇದೆ ಎಂದಿದ್ದಾರೆ.
ಯಡಿಯೂರಪ್ಪನವರಿಗೆ ಮಾನ ಇದ್ದರೆ ಅಲ್ವಾ ಮಾನನಷ್ಟ ಮೊಕದ್ದಮೆ ಹೂಡುವುದು. ಅವರಿಗೆ ಮಾನವೇ ಇಲ್ಲ. ಅಂಥದರಲ್ಲಿ ಮಾನನಷ್ಟ ಮೊಕದ್ದಮೆ ಹೇಗೆ ಹೂಡುತ್ತಾರೆ. ಇದೆಲ್ಲ ಸುಮ್ಮನೇ ನಾಟಕ ಅಷ್ಟೆ ಎಂದು ವ್ಯಂಗ್ಯವಾಡಿದರು