ಅನರ್ಹ ಶಾಸಕರಾಗಿ ಹತಾಶರಾಗಿ ಅವರು ಏನೇನೋ ಮಾತನಾಡುತ್ತಿದ್ದಾರೆ. ಮಂತ್ರಿಯಾಗಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಮಾನ ಮರ್ಯಾದೆ ಇದ್ದಿದ್ದರೆ ಆ ಮಾತು ಹೇಳುತ್ತಿದ್ರಾ ಎಂದು ಸಿದ್ದ ರಾಮಯ್ಯ ಅವರು ಎಂಟಿಬಿ ನಾಗರಾಜ್ ಅವರಿಗೆ ಟೀಕಿಸಿದ್ದಾರೆ.
ಕೋರ್ಟ್ ನಲ್ಲಿ ಅನರ್ಹರು ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದಾರೆ. ಈಗ ಗೆದ್ದು ಮಂತ್ರಿಯಾಗಿ ಕ್ಷೇತ್ರ ಅಭಿವೃದ್ಧಿ ಮಾಡುತ್ತಾರಾ ಎಲ್ಲ ಚುನಾವಣೆಗೆ ಮಾತ್ರ ಮಾತನಾಡುವ ಮಾತುಗಳು. ಚುನಾವಣೆಗಾಗಿ ಹುಣಸೂರು ಜಿಲ್ಲೆ ಬಗ್ಗೆ ಮಾತನಾಡುತ್ತಿದ್ದಾರೆ ಅಷ್ಟೇ ಬ ಮಾತನ್ನು ಕೂಡ ಹೇಳಿದ್ದಾರೆ.