ಮಾರಮ್ಮ ದೇವಸ್ಥಾನದಲ್ಲಿ ನೀಡಲಾದ ಪ್ರಸಾದದಲ್ಲಿ ಬೆರೆಸಲಾದ ವಿಷ ಇದೆ.!!
ಮೈಸೂರಿನ ಸೂಳ್ವಾಡಿ ಮಾರಮ್ಮ ದೇವರ ಪ್ರಸಾದ ಸೇವಿಸಿ ಸಾವನಪ್ಪಿದವರ ಸಂಖ್ಯೆ 14ಕ್ಕೆ ಏರಿದೆ.. ಈ ನಡುವೆ ಈ ಘಟನೆಗೆ ಕಾರಣವೇನು ಎಂಬುದರ ಬಗ್ಗೆ ವಿಧಿವಿಜ್ಞಾನ ಇಲಾಖೆ ವರದಿಯನ್ನು ನೀಡಿದೆ.. ಭಕ್ತಾಧಿಗಳು ಸೇವಿಸಿದ ಆಹಾರದಲ್ಲಿ ಕ್ರೋಟೋಫಾನ್ ಕ್ರಿಮಿನಾಶಕವನ್ನ, ನೀರಿನಲ್ಲಿ ಬೆರೆಸಿ ಅದರಿಂದ ಅನ್ನ ಮಾಡಲಾಗಿದೆ ಎಂದು ವರದಿ ನೀಡಿದೆ..
ಈ ಕೀಟನಾಶಕವು ಗಿಡಿಗಳಿಗೆ ಹುಳು ಹಾಗೆ ರೋಗ ಬಾರದಂತೆ ಸಿಂಪಡಿಸಲಾಗುತ್ತೆ.. ಇನ್ನು ಈ ಕೀಟನಾಶಕವನ್ನ ಪ್ರಸಾದಕ್ಕೆ ಬೆರಸಿದವರು ಯಾರು ಎಂಬ ಬಗ್ಗೆ ತೀರ್ವ ತನಿಖೆ ನಡೆಯುತ್ತಿದೆ..ಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಭಕ್ತರು ಪ್ರಸಾದದ ರೂಪದಲ್ಲಿ ರೈಸ್‍ಬಾತ್ ಸೇವಿಸಿದ್ದಾರೆ. ಸ್ವಲ್ಪ ಸಮಯದ ನಂತರ ರೈಸ್‍ಬಾತ್ ಸೇವಿಸಿದ್ದ 80ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿದ್ರು