ಮಾಲಶ್ರೀ ಪತಿ ಕೊರೊನಾಗೆ ಬಲಿ- ಇವ್ರು ಯಾವೆಲ್ಲಾ ಸಿನಿಮಾ ನಿರ್ಮಾಣ ಮಾಡಿದ್ರು ಗೊತ್ತಾ?

1
26

ನಿರ್ಮಾಪಕ ಹಾಗೂ ನಟಿ ಮಾಲಾಶ್ರೀ ಅವರ ಪತಿ ರಾಮು ಅವರು ಇಂದು (ಏ 26) ಕೊರೊನಾ ವೈರಸ್‌ನಿಂದ ನಿಧನರಾಗಿದ್ದಾರೆ. ಕನ್ನಡದ ಅನೇಕ ಸಿನಿಮಾಗಳನ್ನು ರಾಮು ನಿರ್ಮಾಣ ಮಾಡಿದ್ದರು.

ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಅವರು ಕಳೆದ ಶನಿವಾರ ದಾಖಲೆಯಾಗಿದ್ದರು. ಕಳೆದ ಒಂದು ವಾರದ ಹಿಂದೆ ಕೊರೊನಾ ದೃಢಪಟ್ಟಿತ್ತು. ಸರಿ ಸುಮಾರು ಇಂದು 8 ಗಂಟೆ ಹೊತ್ತಿಗೆ ರಾಮು ನಿಧನರಾಗಿದ್ದಾರೆ. ‘ಲಾಕಪ್ ಡೆತ್’, ‘AK-47’, ‘ರಾಕ್ಷಸ‌’, ‘ಕಲಾಸಿಪಾಳ್ಯ’, ‘ಅರ್ಜುನ್ ಗೌಡ’ ಸೇರಿ ಅವರು ಹಲವು ಸಿನಿಮಾ ನಿರ್ಮಾಣ ಮಾಡಿದ್ದರು.

’99’, ‘ಮುಂಬೈ’, ‘ದಂಡು’, ‘ಡೇಂಜರ್ ಝೋನ್’, ‘ಗಂಗಾ’, ‘ಶಿವಾಜಿನಗರ’, ‘ವೀರ’, ‘ಎಲೆಕ್ಷನ್’, ‘ಸಾಗರ್’, ‘ಕಂಠಿವೀರ’, ‘ಶಕ್ತಿ’, ‘ಗಂಡೆದೆ’, ‘ಕನ್ನಡದ ಕಿರಣ್ ಬೇಡಿ’, ‘ರಜನಿ’, ‘ಗೂಳಿ’, ‘ಮಸ್ತಿ’, ‘ಪ್ರೀತಿಗಾಗಿ’, ‘ತವರಿನ ಸಿರಿ’, ‘ರಾಕ್ಷಸ’, ‘ಆಟೋ ಶಂಕರ್’, ‘ಮಲ್ಲ’, ‘ದುರ್ಗಿ’, ‘ಕಲಾಸಿ ಪಾಳ್ಯ’, ‘ಕಿಚ್ಚ’, ‘ನಂಜುಂಡಿ’, ‘ಹಾಲಿವುಡ್’, ‘ಲಾ ಆಂಡ್ ಆರ್ಡರ್’, ‘ಬಾವ ಬಾಮೈದ’, ‘ಚಾಮುಂಡಿ’, ‘ಸಿಬಿಐ ದುರ್ಗ’, ‘ಲೇಡಿ ಕಮಿಷನರ್’, ‘ಸಿಂಹದ ಮರಿ’, ‘ಹೆಲೋ ಸಿಸ್ಟರ್’, ‘ಮುತ್ತಿನಂಥ ಹೆಂಡತಿ’, ‘ಗೋಲಿಬಾರ್’ ಮುಂತಾದ ಸಿನಿಮಾಗಳಿಗೆ ರಾಮು ಹಣ ಹೂಡಿದ್ದರು. ‘ಗೋಲಿಬಾರ್’ ಅವರ ಮೊದಲ ನಿರ್ಮಾಣದ ಸಿನಿಮಾ

ರಾಮು ಎಂಟರ್‌ಪ್ರೈಸಸ್ ಮೂಲಕ ರಾಮು ಅವರು 30ಕ್ಕೂ ಅಧಿಕ ಸಿನಿಮಾಗಳ ನಿರ್ಮಾಣ ಮಾಡಿದ್ದಾರೆ. ನಟಿ ಮಾಲಾಶ್ರೀ ಅವರ ಜೊತೆ ಸಿನಿಮಾದಲ್ಲಿ ಕೆಲಸ ಮಾಡಿದ್ದ ರಾಮು ಅವರು ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಎರಡು ಮಕ್ಕಳಿದ್ದಾರೆ. ಮಾಲಾಶ್ರೀ, ಮಗ, ಮಗಳನ್ನು ರಾಮು ಅಗಲಿದ್ದಾರೆ.

 

1 COMMENT

LEAVE A REPLY

Please enter your comment!
Please enter your name here